ಪೂರ್ವಭಾವಿ ಪರೀಕ್ಷೆ
ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
‘ಭಾರತಕ್ಕೆ ಹೊರ್ಮುಜ್ ಜಲಸಂಧಿ ಮುಕ್ತ’
ಸಂದರ್ಭ: ಅಮೆರಿಕ ಹಾಗೂ ಮಿತ್ರದೇಶಗಳನ್ನು ಹೊರತುಪಡಿಸಿದ ರಾಷ್ಟ್ರಗಳ ಹಡಗುಗಳು ಹೊರ್ಮುಜ್ ಜಲಸಂಧಿ ಮೂಲಕ ಸಾಗಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಅಂತರರಾಷ್ಟ್ರೀಯ ಕಡಲ ಸಂಘಟನೆಗಳ ಸದಸ್ಯರಾಷ್ಟ್ರಗಳಿಗೆ ಇರಾನ್ ತಿಳಿಸಿದೆ.
ಇತಿಹಾಸ ಮತ್ತು ಸ್ಥಾಪನೆ
ಸ್ಥಾಪನೆ: 17 ಮಾರ್ಚ್ 1948 ರಂದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಡಿ ಸ್ಥಾಪನೆ.
ಕಾರ್ಯಾರಂಭ: 1959ರಲ್ಲಿ ಅಧಿಕೃತವಾಗಿ ಕಾರ್ಯಾರಂಭ.
ಮುಖ್ಯ ಉದ್ದೇಶ: ಸಮುದ್ರ ಸಾರಿಗೆ ಸುರಕ್ಷತೆ, ಮಾಲಿನ್ಯ ನಿಯಂತ್ರಣ, ಮತ್ತು ಅಂತರರಾಷ್ಟ್ರೀಯ ಸಾಗರ ಕಾನೂನುಗಳ ರೂಪಣೆ.
ಮುಖ್ಯ ಕಾರ್ಯಗಳು
ಸಮುದ್ರ ಸುರಕ್ಷತೆ: ಹಡಗುಗಳ ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆಗಳಿಗೆ ಅಂತರರಾಷ್ಟ್ರೀಯ ಮಾನದಂಡ.
ಪರಿಸರ ಸಂರಕ್ಷಣೆ: ಸಮುದ್ರ ಮಾಲಿನ್ಯ ತಡೆ (oil spills, plastics, chemical discharge).
ಸಾಗರ ಕಾನೂನು: ಹಡಗುಗಳ ನೋಂದಣಿ, ಸಮುದ್ರ ಮಾರ್ಗಗಳಲ್ಲಿ ಸುರಕ್ಷಿತ ಸಂಚಾರ.
ಸಮುದ್ರ ಕಾರ್ಮಿಕರ ಹಕ್ಕುಗಳು: ನಾವಿಕರ ಸುರಕ್ಷತೆ ಮತ್ತು ಕಲ್ಯಾಣ.
ಅಂತರರಾಷ್ಟ್ರೀಯ ಸಹಕಾರ: ಸದಸ್ಯ ರಾಷ್ಟ್ರಗಳ ನಡುವೆ ಸಮುದ್ರ ಸಾರಿಗೆ ನಿಯಮಗಳ ಏಕೀಕರಣ.
ಪ್ರಸ್ತುತ ಪರಿಸ್ಥಿತಿ (2026)
ಮಧ್ಯಪ್ರಾಚ್ಯ ಸಂಕಷ್ಟ: ಹೋರ್ಮುಜ್ ಕಣಿವೆಯಲ್ಲಿ ಹಡಗುಗಳ ಮೇಲೆ ದಾಳಿಗಳನ್ನು IMO ಖಂಡಿಸಿದೆ.
ತುರ್ತು ಸಭೆ: ಲಂಡನ್ನಲ್ಲಿ ವಿಶೇಷ ಸಭೆ ನಡೆಸಿ, ಹಡಗುಗಳ ಸುರಕ್ಷಿತ ಸಂಚಾರಕ್ಕೆ ಅಂತರರಾಷ್ಟ್ರೀಯ ಸಹಕಾರದ ಅಗತ್ಯವನ್ನು ಒತ್ತಿ ಹೇಳಿದೆ.
ಸಚಿವರ ಹೇಳಿಕೆ: “ನಾವಿಕರ ಸಾವನ್ನು ಸಹಿಸಲಾಗುವುದಿಲ್ಲ, ಅವರು ಗುರಿಯಾಗಬಾರದು” ಎಂದು ಪ್ರಧಾನ ಕಾರ್ಯದರ್ಶಿ ಅರ್ಸೆನಿಯೋ ಡೊಮಿಂಗ್ವೆಜ್ ಹೇಳಿದ್ದಾರೆ.
ಮಹತ್ವ
ಭಾರತಕ್ಕೆ ಪ್ರಾಮುಖ್ಯತೆ: 90% ಕ್ಕಿಂತ ಹೆಚ್ಚು ವಿದೇಶಿ ವ್ಯಾಪಾರ ಸಮುದ್ರ ಮಾರ್ಗದ ಮೂಲಕ ಸಾಗುತ್ತದೆ. IMO ನಿಯಮಗಳು ಭಾರತದ ಹಡಗುಗಳು, ಬಂದರುಗಳು ಮತ್ತು ಸಮುದ್ರ ಸಾರಿಗೆ ಸುರಕ್ಷತೆಗೆ ನೇರ ಪರಿಣಾಮ ಬೀರುತ್ತವೆ.
ಜಾಗತಿಕ ಆರ್ಥಿಕತೆ: IMO ನಿಯಮಗಳು ಜಾಗತಿಕ ವ್ಯಾಪಾರ, ಇಂಧನ ಸಾಗಣೆ, ಮತ್ತು ಪರಿಸರ ಸಂರಕ್ಷಣೆಗೆ ಮೂಲಭೂತ.
ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
ಜಲ ಜೀವನ್ ಮಿಷನ್ (ಜೆಜೆಎಂ)
ಸಂದರ್ಭ: ‘ಮನೆ ಮನೆಗೆ ಪೈಪ್ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಜಲ ಜೀವನ್ ಮಿಷನ್ (ಜೆಜೆಎಂ) ನಿಧಿಯಡಿ ಕೇಂದ್ರ ದಿಂದ ಹಂಚಿಕೆಯಾದ ₹24,819.48 ಕೋಟಿಯಲ್ಲಿ ರಾಜ್ಯಕ್ಕೆ ಕೇವಲ ₹ 11,189 ಕೋಟಿ ಪಡೆಯಲಷ್ಟೆ ಸಾಧ್ಯವಾಗಿದೆ’ ಎಂದು ಜಲ ಜೀವನ್ ಮಿಷನ್ ಅನುಷ್ಠಾನ ಕುರಿತ ಮಹಾಲೇಖಪಾಲರ ವರದಿ ಉಲ್ಲೇಖಿಸಿದೆ.
- ‘2019-20ರಿಂದ 2023-24 ರವರೆಗಿನ ಅವಧಿಯ ಕುರಿತ ಕಾರ್ಯ ನಿರ್ವಹಣಾ ವರದಿಯನ್ನು ವಿಧಾನಸಭೆ ಯಲ್ಲಿ ಮಂಡಿಸಲಾಯಿತು.
- ಟೆಂಡರ್ ವಿಳಂಬ, ಭೂಮಿ ಲಭ್ಯತೆಗೂ ಮೊದಲೇ ಕಾಮಗಾರಿ ವಹಿಸಿರುವುದು, ಭೂ ಮಂಜೂರಾತಿ ಪಡೆಯಲು ವಿಳಂಬ, ಡಿಪಿಆರ್ಗಳ ಕೊರತೆ ಮತ್ತಿತರ ನಾನಾ ಕಾರಣಗಳಿಗೆ ರಾಜ್ಯಕ್ಕೆ ಕೇಂದ್ರದಿಂದ ಅನುದಾನ ಪಡೆಯಲು ಸಾಧ್ಯ ಆಗಿಲ್ಲ. ರಾಜ್ಯ ಸರ್ಕಾರವು ಬಳಕೆ ಪ್ರಮಾಣಪತ್ರ ಮತ್ತು ಲೆಕ್ಕಪರಿಶೋಧಕ ವರದಿ ಸಲ್ಲಿಸಲು 3ರಿಂದ 9 ತಿಂಗಳವರೆಗೆ ವಿಳಂಬ ಆಗಿರುವುದು ಅನುದಾನ ಬಳಕೆ ಆಗದಿರಲು ಕಾರಣ’ ಎಂದೂ ವರದಿ ಹೇಳಿದೆ.
- ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿರುವ ಈ ಯೋಜನೆಯಲ್ಲಿ ಸಮುದಾಯಗಳ ಸಹಭಾಗಿತ್ವವೂ ಇದೆ ಸಮುದಾಯವೂ ಕೊಡುಗೆ ನೀಡಬೇಕು. ಆದರೆ, ರಾಜ್ಯದಲ್ಲಿ ಸಮುದಾಯದ ಕೊಡುಗೆ ಅತ್ಯಲ್ಪವಾಗಿದ್ದು, ನಿರೀಕ್ಷಿತ ₹1,594.90 ಕೋಟಿಯಲ್ಲಿ ಕೇವಲ ₹22.57 ಕೋಟಿ ಮಾತ್ರ ಸಂಗ್ರಹಿಸ ಲಾಗಿದೆ ಎಂದು ವರದಿ ಬೊಟ್ಟು ಮಾಡಿದೆ.
- ‘ರಾಜ್ಯದ 533 ಗ್ರಾಮಗಳಲ್ಲಿ ಕ್ಷೇತ್ರ ತಪಾಸಣಾ ಕಿಟ್ ಗಳನ್ನು ಬಳಸುವ ಬಗ್ಗೆ, ಮಹಿಳೆಯರಿಗೆ ತರಬೇತಿ ನೀಡಿರಲಿಲ್ಲ ಕಲುಷಿತ ನೀರಿನ ಮಾದರಿಗಳ ಪರೀಕ್ಷೆಯನ್ನು 2023-24ರಲ್ಲಿ ಮಾತ್ರ ಮಾಡಲಾಗಿದೆ. ಅದೂ ಕೇವಲ ಶೇ 18ರಷ್ಟು 31 ಜಿಲ್ಲಾ ಮಟ್ಟದ ಮತ್ತು 48 ತಾಲ್ಲೂಕು ಮಟ್ಟದ ಪ್ರಯೋಗಾಲಯಗಳಲ್ಲಿ ನೀರಿನಲ್ಲಿ ಆರ್ಸೆನಿಕ್ ಮಟ್ಟ ಪರೀಕ್ಷೆ ಮಾಡುವ ವ್ಯವಸ್ಥೆ ಇಲ್ಲ. ಸೂಕ್ಷ್ಮ ಜೀವ ವೈಜ್ಞಾನಿಕ ನಿಯಾಂತಗಳನ್ನು ಪರೀಕ್ಷಿಸಲು 17 ಜಿಲ್ಲಾಮಟ್ಟದ ಮತ್ತು 4 ತಾಲ್ಲೂಕು ಮಟ್ಟದ ಪ್ರಯೋಗಾಲಯಗಳನ್ನು ಮಾತ್ರ ಸಜ್ಜುಗೊಳಿಸಲಾಗಿತ್ತು 2019-10ರಿಂದ 2023-24ರ ಅವಧಿಯಲ್ಲಿ ಗೊತ್ತುಪಡಿಸಿದ ರಾಜ್ಯದ ಪ್ರಯೋಗಾಲಯದಿಂದ ಒಂದೇ ಒಂದು ಮಾದರಿಯನ್ನು ಪರೀಕ್ಷಿಸಲು ಇಲಾಖೆ ವಿಫಲವಾಗಿತ್ತು’ ಎಂದು ವರದಿಯಲ್ಲಿದೆ.
- ಪರಿಣಾಮ ‘ಪ್ರಾಥಮಿಕ ಶಾಲೆಗೆ ಹೋಗುವ ವಿದ್ಯಾರ್ಥಿನಿಯರ ಶಾಲೆ ಬಿಡುವ ಪ್ರಮಾಣ ಕಡಿಮೆ ಮಾಡಲುಸುತ್ತು ಮಹಿಳೆಯರ ಹೊರೆಯನ್ನು ಕಡಿಮೆ ಮಾಡಲು ಈ ಯೋಜನೆ ಸಹಾಯ ಮಾಡಿದೆ. ಆದರೆ, ಉದ್ಯೋಗ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಅಷ್ಟೊಂದು ಪರಿಣಾಮ ಬೀರಿಲ್ಲ’ ಎಂದೂ ವರದಿ ಅಭಿಪ್ರಾಯಪಟ್ಟಿದೆ.
- ಶಿಫಾರಸು ಜೆಜೆಎಂ ಅನುಷ್ಠಾನ ಮೇಲ್ವಿಚಾರಣೆಗೆ ರಚಿಸಲಾದ ಸಮಿತಿಗಳು ಸಂಪನ್ಮೂಲ ಬಳಕೆಯ ಸಮನ್ವಯ ಕಡೆಗೆ ರಾಜ್ಯ ಸರ್ಕಾರ ಗಮನಹರಿಸಬೇಕು, ಕಾಮಗಾರಿಗಳನ್ನು ಪೂರ್ಣಗೊಳಿಸುವಾಗ ಆಗುವ ವಿಳಂಬ ತಪ್ಪಿಸಲು ಭೂಮಿಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು. ಗುತ್ತಿಗೆದಾರರ ಟೆಂಡರ್ ಸಾಮರ್ಥ್ಯ ಪರಿಗಣಿಸಿದ ನಂತರ ಕಾಮಗಾರಿ ವಹಿಸಬೇಕು ಕೇಂದ್ರದಿಂದ ಬಿಡುಗಡೆಯಾದ ಹಣವನ್ನು ಪಡೆದುಕೊಳ್ಳಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ನೀರಿನ ಗುಣಮಟ್ಟದ ಪರೀಕ್ಷೆಗೆ ಆದ್ಯತೆ ನೀಡಬೇಕು ತಪ್ಪಾದ ವರದಿ ಆನ್ಲೈನ್ ಪೋರ್ಟಲ್ನಲ್ಲಿ ಅಪ್ಲೋಡ್ ಆಗದಂತೆ ರಾಜ್ಯ ಸರ್ಕಾರ ಪರಿಶೀಲಿಸಬೇಕು ಎಂದೂ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
- ಈ ಯೋಜನೆಯ ಅವಧಿ 2024ರ ಮಾರ್ಚ್ 31ಕ್ಕೆ ಕೊನೆಗೊಂಡಿದೆ. ಆದರೆ, ಅದೇ ವರ್ಷದ ನವೆಂಬರ್ವರೆಗೆ 72.14 ಲಕ್ಷ ಮನೆಗಳ ಪೈಕಿ ಇನ್ನೂ 24.52 ಲಕ್ಷ ಮನೆಗಳಿಗೆ (ಶೇ 34) ನಲ್ಲಿಯ ಸಂಪರ್ಕ ಒದಗಿಸಿಲ್ಲ ಎಂದೂ ವರದಿ ಉಲ್ಲೇಖಿಸಿದೆ.
- ‘ಹಲವು ಕಡೆ ವಾಸಸ್ಥಳಗಳಲ್ಲಿ ಮನೆಗಳ ಸಂಖ್ಯೆ ಕಡಿಮೆ ಆಗಿರುವುದರಿಂದ ವೆಚ್ಚ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಕಾಮಗಾರಿಗಳನ್ನು ಕೈಬಿಡಲಾಗಿದೆ. ಕೆಲವು ಕಡೆ ಓವರ್ ಹೆಡ್ ಟ್ಯಾಂಕ್ (ಒಎಚ್ ಟಿ) ನಿರ್ಮಾಣಕ್ಕೆ ಭೂಮಿಯನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸದ ಕಾರಣ ಕಾಮಗಾರಿ ಆರಂಭಿಸಲು ಸಾಧ್ಯ ಆಗಿಲ್ಲ.
- ಪಂಚಾಯತ್ರಾಜ್ ಇಲಾಖೆಯು 2024ರ ಮೇ ವೇಳೆಗೆ ತೆರೆದ ಬಾವಿಯನ್ನು ನಿರ್ಮಿಸಿ, ಕೊಳವೆಗಳನ್ನು ಹಾಕಲು ₹ 60.41 ಲಕ್ಷ ವೆಚ್ಚ ಮಾಡಿದ್ದರೂ ಕಾಮಗಾರಿ ಅರ್ಥದಲ್ಲಿಯೇ ಸ್ಥಗಿತಗೊಂಡಿದೆ ಹೀಗಾಗಿ, 435 ಮನೆಗಳಿಗೆ ನೀರು ಪೂರೈಸುವ ಉದ್ದೇಶ ಈಡೇರಿಲ್ಲ’ ಎಂದು ವರದಿ ಹೇಳಿದೆ.
ಮುಖ್ಯ ಪರೀಕ್ಷೆ
ಪತ್ರಿಕೆ-I: ಪ್ರಬಂಧಗಳು
ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ
“ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವ ಕುರಿತು ಇತಿಹಾಸ, ಕಾನೂನು ಪ್ರಕ್ರಿಯೆ ಹಾಗೂ ರಾಜಕೀಯ ಪರಿಣಾಮಗಳನ್ನು ಚರ್ಚಿಸಿ. 2029ರೊಳಗೆ ಮಹಿಳಾ ಪ್ರತಿನಿಧಿತ್ವವನ್ನು ಖಚಿತಪಡಿಸಲು ಲೋಕಸಭಾ ಸ್ಥಾನಗಳನ್ನು ಹೆಚ್ಚಿಸುವ ಹಾಗೂ ಸಂವಿಧಾನ ತಿದ್ದುಪಡಿ ಪ್ರಸ್ತಾಪಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ.”
ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ
“ಕರ್ನಾಟಕದಲ್ಲಿ ಜಲ ಜೀವನ್ ಮಿಷನ್ ಅನುಷ್ಠಾನವನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ. ಕೇಂದ್ರದಿಂದ ಹಂಚಿಕೆಯಾದ ₹24,819.48 ಕೋಟಿಯಲ್ಲಿ ರಾಜ್ಯವು ಕೇವಲ ₹11,189 ಕೋಟಿ ಮಾತ್ರ ಬಳಸಲು ಸಾಧ್ಯವಾದ ಕಾರಣವೇನು? ಅನುಷ್ಠಾನದಲ್ಲಿ ಎದುರಾದ ಸವಾಲುಗಳು, ಮಹಾಲೇಖಪಾಲರ ವರದಿ ಉಲ್ಲೇಖಗಳು ಹಾಗೂ ಮನೆ ಮನೆಗೆ ಪೈಪ್ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಪರಿಣಾಮಕಾರಿ ಕ್ರಮಗಳನ್ನು ಸೂಚಿಸಿ.”
ಪತ್ರಿಕೆ-II: ಸಾಮಾನ್ಯ ಅಧ್ಯಯನ-1
ಪತ್ರಿಕೆ-III: ಸಾಮಾನ್ಯ ಅಧ್ಯಯನ-2
ಮತಾಂತರ, ಆಂಧ್ರಪ್ರದೇಶ ಹೈಕೋರ್ಟ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್: ಎಸ್ಸಿ ಸ್ಥಾನಮಾನ ನಷ್ಟ
ಸಂದರ್ಭ: ಪರಿಶಿಷ್ಟ ಜಾತಿಗೆ (ಎಸ್ಸಿ) ಸೇರಿದ ವ್ಯಕ್ತಿಯು ಹಿಂದೂ, ಬೌದ್ಧ ಅಥವಾ ಸಿಖ್ ಧರ್ಮ ಹೊರತುಪಡಿಸಿ ಇತರ ಧರ್ಮಗಳಿಗೆ ಮತಾಂತರಗೊಂಡಲ್ಲಿ ಆತ/ಆಕೆಯ ಎಸ್ಸಿ ಸ್ನಾನಮಾನ ನಷ್ಟವಾಗಲಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

- ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಗಳನ್ನು ಹೊರತುಪಡಿಸಿ ಇತರ ಧರ್ಮಗಳಲ್ಲಿ ಶ್ರದ್ಧೆ-ನಂಬಿಕೆ ಹೊಂದಿರುವುದಾಗಿ ಘೋಷಿಸಿಕೊಳ್ಳುವ ವ್ಯಕ್ತಿಯು ಪರಿಶಿಷ್ಟ ಜಾತಿಗೆ (ಎಸ್ಸಿ) ಸೇರಿದವರು ಎಂದು ಪರಿಭಾವಿಸು ವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
- ಪರಿಶಿಷ್ಟ ಪಂಗಡದವರ (ಎಸ್ಟಿ) ಮತಾಂತರಕ್ಕೆ ಸಂಬಂಧಪಟ್ಟಂತೆ ಈ ಆದೇಶವು ಅನ್ವಯಿಸದು. ಏಕೆಂದರೆ, ಎಸ್ಟಿ ಸ್ನಾನಮಾನವು ಧರ್ಮ ಆಧಾರಿತ ವಾಗಿಲ್ಲ. ಈ ಪಂಗಡಕ್ಕೆ ಸೇರಿದವರು ಅನುಸರಿಸುವ ಸಂಪ್ರದಾಯ, ಜೀವನ ಪದ್ಧತಿ ಮತ್ತು ಸಂಬಂಧಿಸಿದ ಬುಡಕಟ್ಟು ಗುಂಪು ಈ ಸಮುದಾಯವನ್ನು ಹೇಗೆ ಸ್ವೀಕರಿಸುತ್ತದೆ ಎಂಬುದರ ಮೇಲೆ ಎಸ್ಟಿ ಸ್ನಾನಮಾನ ನಿರ್ಧಾರವಾಗುತ್ತದೆ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ.
- ‘ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯು ಇತರ ಧರ್ಮಕ್ಕೆ ಮತಾಂತರಗೊಂಡಾಗ ಆ ಕ್ಷಣವೇ ಹಾಗೂ ಸಂಪೂರ್ಣವಾಗಿ ಆತ/ಆಕೆ ಎಸ್ಸಿ ಸ್ನಾನಮಾನವನ್ನು ಕಳೆದುಕೊಳ್ಳುವರು’ ಎಂಬ ಆಂಧ್ರ ಪ್ರದೇಶ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದು ತೀರ್ಪು ನೀಡಿದ ವೇಳೆ ಸುಪ್ರೀಂ ಕೋರ್ಟ್ ಈ ಮಾತು ಹೇಳಿದೆ.
- ‘ಯಾವುದೇ ವ್ಯಕ್ತಿಯು ಕ್ರೈಸ್ತ ಧರ್ಮ ಸ್ವೀಕರಿಸಿ, ಆ ಧರ್ಮದಲ್ಲಿ ಶ್ರದ್ಧೆ ಹೊಂದಿದ್ದಾಗಿ ಘೋಷಿಸಿ ಹಾಗೂ ಅದನ್ನು ಪಾಲನೆ ಮಾಡುವುದನ್ನು ಆರಂಭಿಸಿದ ಬಳಿಕ ಆ ವ್ಯಕ್ತಿಯು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರು ಎಂಬುದಾಗಿ ಪರಿಗಣಿಸಲಾಗದು’ ಎಂದು ಆಂಧ್ರ ಪ್ರದೇಶ ಹೈಕೋರ್ಟ್ ಕಳೆದ ವರ್ಷ ಏಪ್ರಿಲ್ 30ರಂದು ಆದೇಶಿಸಿತ್ತು.
- ‘ಜಾತಿ ವ್ಯವಸ್ಥೆ ಕ್ರೈಸ್ತ ಧರ್ಮಕ್ಕೆ ವಿರುದ್ಧವಾದುದು. ಹೀಗಾಗಿ, ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯು ‘ಎಸ್ಸಿ, ಎಸ್ಟಿ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ’ಯ ಅವಕಾಶಗಳಡಿ ಪರಿಹಾರ ಕೇಳುವುದನ್ನು ನಿರ್ಬಂಧಿಸಲಾಗಿದೆ’ ಎಂದು ಹೈಕೋರ್ಟ್ ಹೇಳಿತ್ತು.
- ಈ ಆದೇಶ ಪ್ರಶ್ನಿಸಿ, ಪಾದ್ರಿ ಚಿಂತಾಡ ಆನಂದ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪ್ರಶಾಂತ ಕುಮಾರ್ ಮಿಶ್ರಾ, ಎನ್.ವಿ.ಅಂಜಾರಿಯಾ ಹಾಗೂ ಮನಮೋಹನ್ ಅವರು ಇದ್ದ ಪೀಠ ನಡೆಸಿತು.
- ಚಿಂತಾಡ ಆನಂದ ಅವರ ಮೇಲ್ಮನವಿಯನ್ನು ವಜಾಗೊಳಿಸುವ ಜೊತೆಗೆ, ಎಸ್ಸಿ, ಎಸ್ಟಿ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯ ಅವಕಾಶಗಳಡಿ ವ್ಯಕ್ತಿಯೊಬ್ಬರ ವಿರುದ್ಧ ಹೊರಿಸಿದ್ದ ಆರೋಪಗಳನ್ನು ನ್ಯಾಯಪೀಠ ರದ್ದು ಮಾಡಿದೆ.
- ಈ ಪ್ರಕರಣದಲ್ಲಿ ಮೇಲ್ಮನವಿದಾರ ಕ್ರೈಸ್ತ ಧರ್ಮದಿಂದ ಪುನಃ ತನ್ನ ಮೂಲ ಧರ್ಮಕ್ಕೆ ಮತಾಂತರಗೊಂಡಿಲ್ಲ ಅಥವಾ ಆತ ಸಮುದಾಯಕ್ಕೆ ಮರಳಿರುವುದಾಗಿ ಮಾದಿಗ ಸಮುದಾಯ ಒಪ್ಪಿಕೊಂಡಿಲ್ಲ ಎಂಬುದನ್ನು ಪೀಠ ಗಮನಿಸಿದೆ.
- ಮೇಲ್ಮನವಿದಾರ ಕ್ರೈಸ್ತ ಧರ್ಮದಲ್ಲಿ ಶ್ರದ್ಧೆ-ನಂಬಿಕೆ ಹೊಂದಿದ್ದು ಅದನ್ನು ಪಾಲನೆ ಮಾಡುತ್ತಿದ್ದಾರೆ. ದಶಕಕ್ಕೂ ಹೆಚ್ಚು ಕಾಲ ಪಾದ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಂಧ್ರಪ್ರದೇಶದ ಬಾಪಟ್ಟ ಜಿಲ್ಲೆಯ ಪಿಟ್ಟಲವಾನಿಪಾಲೆಂನಲ್ಲಿ ಪಾದ್ರಿಗಳ ಫೆಲೋಶಿಪ್ನ ಖಜಾಂಚಿಯೂ ಆಗಿದ್ದಾರೆ. ಗ್ರಾಮದ ಮನೆಗಳಲ್ಲಿ ಪ್ರತಿ ಭಾನುವಾರ ಪ್ರಾರ್ಥನಾ ಸಭೆಗಳನ್ನು ಆಯೋಜಿಸುತ್ತಿದ್ದಾರೆ. ಅವರ ಈ ಉದ್ಯೋಗ ಹಾಗೂ ವರ್ತನೆಯು ಮೇಲ್ಮನವಿದಾರ ಕ್ರೈಸ್ತ ಧರ್ಮದಲ್ಲಿ ನಂಬಿಕೆ ಹೊಂದಿರುವುದನ್ನು ಸಾರ್ವಜನಿಕವಾಗಿ ಘೋಷಿಸಿದಂತೆಯೆ ಆಗಿದೆ ಎಂದೂ ಪೀಠ ಹೇಳಿದೆ.

ದಯಾಮರಣ: ಹರೀಶ್ ಇನ್ನಿಲ್ಲ
ಸಂದರ್ಭ: ದೇಶದಲ್ಲಿ ಪರೋಕ್ಷ ದಯಾಮರಣಕ್ಕೆ ಅವಕಾಶ ಪಡೆದುಕೊಂಡ ಮೊದಲ ವ್ಯಕ್ತಿ, 13 ವರ್ಷಗಳಿಂದ ಕೋಮಾ ದಲ್ಲಿದ್ದ ಗಾಜಿಯಾಬಾದ್ನ ಹರೀಶ್ ರಾಣಾ (31) ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಏಮ್ಸ್) ನಿಧನರಾದರು.
- ದಶಕಕ್ಕೂ ಹೆಚ್ಚು ಕಾಲ ಹಾಸಿಗೆ ಯಲ್ಲಿಯೇ ಜೀವಚ್ಛವದಂತೆ ಇದ್ದ ಅವರ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಮಾರ್ಚ್ 11ರಂದು ಅನುಮತಿ ನೀಡಿತ್ತು ಸುಪ್ರೀಂಕೋರ್ಟ್ನ 2023ರ ಪರಿಷ್ಕೃತ ಮಾರ್ಗಸೂಚಿ ಅನ್ವಯ ದೇಶದಲ್ಲಿ ದಯಾಮರಣಕ್ಕೆ ಅವಕಾಶ ಪಡೆದ ಮೊದಲ ಪ್ರಕರಣ ಹರೀಶ್ ರಾಣಾ ಅವರದ್ದಾಗಿದೆ.
- ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದ ರಾಣಾ, 2013ರಲ್ಲಿ ವಸತಿ ನಿಲಯದ ನಾಲ್ಕನೇ ಮಹಡಿಯಿಂದ ಆಕಸ್ಮಿಕ ವಾಗಿ ಜಾರಿ ಬಿದ್ದು, ತಲೆಗೆ ತೀವ್ರ ಪೆಟ್ಟಾಗಿ ಕೋಮಾಕ್ಕೆ ಜಾರಿದ್ದರು.
‘ಇವ ನಮ್ಮವ’ ಮಸೂದೆ ಅಂಗೀಕಾರ
ಸಂದರ್ಭ: ಮರ್ಯಾದೆಗೇಡು ಹತ್ಯೆಯಂತಹ ಅಮಾನವೀಯ ಕೃತ್ಯಗಳಿಗೆ ಕಡಿವಾಣ ಹಾಕುವ ಉದ್ದೇಶದ ‘ಇವ ನಮ್ಮವ ಇವ ನಮ್ಮವ ಮಸೂದೆ’ಗೆ ಸುದೀರ್ಘ ಅವಧಿಯ ಚರ್ಚೆಯ ನಂತರ ವಿಧಾನ ಪರಿಷತ್ತು ಅಂಗೀಕಾರ ನೀಡಿತು.
- ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಪರಿಷತ್ತಿನ ಕಲಾಪದಲ್ಲಿ ‘ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ಮಸೂದೆ-2026’ ಅನ್ನು ಮಂಡಿಸಿದರು.
- ಆಡಳಿತ ಮತ್ತು ವಿರೋಧ ಪಕ್ಷದ ಒಟ್ಟು 23 ಸದಸ್ಯರು ಮಸೂದೆಯಲ್ಲಿನ ಅಂಶಗಳ ಕುರಿತು 4 ಗಂಟೆ 25 ನಿಮಿಷ ಮಾತನಾಡಿ, ಮಸೂದೆಯನ್ನು ಸ್ವಾಗತಿಸಿದರು.
- ಹೆಣ್ಣುಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು 18 ವರ್ಷದಿಂದ 21 ವರ್ಷಕ್ಕೆ ಹೆಚ್ಚಿಸಬೇಕು, ಈ ಮಸೂದೆಯ ನಿಯಮಗಳಂತೆ ವಿವಾಹವಾಗಲು ಇಚ್ಛಿಸುವ ಜೋಡಿಗಳಿಗೆ ಆಪ್ತ ಸಮಾಲೋಚನೆ ನೀಡುವ ವ್ಯವಸ್ಥೆಯನ್ನು ಮಾಡಬೇಕು, ಶಿಕ್ಷೆ ಪ್ರಮಾಣವನ್ನು ಐದು ವರ್ಷದಿಂದ ಜೀವಾವಧಿಗೆ ಹೆಚ್ಚಿಸಬೇಕು ಎಂಬ ಸಲಹೆ ಚರ್ಚೆಯ ವೇಳೆ ವ್ಯಕ್ತವಾಯಿತು.
- ‘ನಾನೇ ಕ್ಷೌರ ಮಾಡಿಕೊಳ್ಳುತ್ತೇನೆ’ ‘ನಮ್ಮೂರಿನಲ್ಲಿ ನಮ್ಮವರಿಗೆ ಕ್ಷೌರಿಕ ಕ್ಷೌರ ಮಾಡುತ್ತಿರಲಿಲ್ಲ. ನಮ್ಮಪ್ಪ ಮನೆಯಲ್ಲೇ ಕ್ಷೌರ ಮಾಡುವ ಸಾಮಗ್ರಿ ಇಟ್ಟುಕೊಂಡಿದ್ದರು ಅಪ್ಪನೇ ನಮಗೆ ಕ್ಷೌರ ಮಾಡುತ್ತಿದ್ದರು ಕಾಲೇಜು ದಿನಗಳಲ್ಲಿ ಒಮ್ಮೆ ಕ್ಷೌರದ ಅಂಗಡಿಗೆ ಹೋಗಿದ್ದೆ ಜಾತಿ ಕಾರಣಕ್ಕೆ ಗದರಿಸಿ ಅಲ್ಲಿಂದ ಹೊರ ಕಳುಹಿಸಿದ್ದರು ಅಂದಿನಿಂದ ಇಲ್ಲಿಯವರೆಗೂ ನಾನೇ ಕ್ಷೌರ ಮಾಡಿಕೊಳ್ಳುತ್ತಿದ್ದೇನೆ, ಮರ್ಯಾದೆಗೇಡು ಹತ್ಯೆ ತಡೆಗೆ ಮಸೂದೆ ರೂಪಿಸುವ ಸರ್ಕಾರದ ನಿರ್ಧಾರ ಒಳ್ಳೆಯ ನಡೆ’ ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಲೋಕಸಭೆ, ವಿಧಾನಸಭೆಗಳಲ್ಲಿ ಶೇ 33ರಷ್ಟು ಪ್ರಾತಿನಿಧ್ಯ ಕಲ್ಪಿಸಲು ಕೇಂದ್ರದ ಚಿಂತನೆ
ಸಂದರ್ಭ: ಕೇಂದ್ರ ಸರ್ಕಾರವು ಮಹಿಳೆಯರಿಗೆ ಸಂಸತ್ತಿನಲ್ಲಿ ಮತ್ತು ವಿಧಾನಸಭೆಗಳಲ್ಲಿ ಮೀಸಲಾತಿ ದೊರಕಿಸಿಕೊಡುವ ದಿಸೆಯಲ್ಲಿ ಮಹತ್ವದ ಹೆಜ್ಜೆ ಹಾಕಲು ಮುಂದಾಗಿದೆ.

- ಲೋಕಸಭೆಯಲ್ಲಿ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವುದಕ್ಕಾಗಿ ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿಯೇ ಎರಡು ಮಸೂದೆಗಳನ್ನು ಮಂಡಿಸಲಿದೆ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಯ ಜತೆಯಲ್ಲೇ ಮಹಿಳಾ ಮೀಸಲಾತಿ ಜಾರಿ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎನ್ನಲಾಗುತ್ತಿದೆ.
- ಲೋಕಸಭೆ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡಬೇಕು ಎನ್ನುವುದು ಬಹಳ ಹಳೆಯ ಬೇಡಿಕೆ. 2029ರ ಲೋಕಸಭಾ ಚುನಾವಣೆಯಲ್ಲೇ ಆ ಬೇಡಿಕೆ ಈಡೇರಿಸಲು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಚಿಂತನೆ ನಡೆಸಿದ್ದು. ಅದಕ್ಕಾಗಿ ತಂತ್ರಗಾರಿಕೆಯಲ್ಲಿ ತೊಡಗಿದೆ ನಾರಿ ಶಕ್ತಿ ವಂದನಾ ಅಧಿನಿಯಮಕ್ಕೆ (ಮಹಿಳಾ ಮೀಸಲಾತಿ ಕಾಯ್ದೆ) ತಿದ್ದುಪಡಿ ತರಲು ಸಂವಿಧಾನ ತಿದ್ದುಪಡಿ ಮಾಡುವ ಮಸೂದೆ, ಕ್ಷೇತ್ರ ಮರುವಿಂಗಡಣೆ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಈ ಅಧಿವೇಶನದಲ್ಲೇ ಕೇಂದ್ರವು ಸಂಸತ್ನಲ್ಲಿ ಮಂಡಿಸಲು ಬಯಸಿದೆ. ಒಂದು ವೇಳೆ ಸಾಧ್ಯವಾಗದಿದ್ದರೆ, ಅದಕ್ಕಾಗಿಯೇ ತುರ್ತಾಗಿ ವಿಶೇಷ ಅಧಿವೇಶನ ಕರೆಯುವುದಕ್ಕೂ, ಅದು ಯೋಚಿಸಿದೆ ಎಂದು ವರದಿಯಾಗಿದೆ.
- ಸಂವಿಧಾನಕ್ಕೆ 106ನೇ ತಿದ್ದುಪಡಿ ತಂದು ಮಹಿಳೆಯರಿ ಶೇ 33ರನ್ನು ಮೀಸಲಾತಿ ಕಲ್ಪಿಸುವ ಮಸೂದೆಯನ್ನು 2023ರಲ್ಲಿ ಸಂಸತ್ತು ಮೂರನೇ ಎರಡು ಬಹುಮತದೊಂದಿಗೆ ಅಂಗೀಕರಿಸಿತ್ತು ರಾಷ್ಟ್ರಪತಿ ಬ್ರೌಪದಿ ಮುರ್ಮು ಅವರು ಸೆಪ್ಟೆಂಬರ್ನಲ್ಲಿ ಮಸೂದೆಗೆ ಅಂಕಿತ ಹಾಕಿದ್ದರು. 2027ರಲ್ಲಿ ನಡೆಯಲಿರುವ ಜನಗಣತಿ ಆಧಾರದಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತು ಇನ್ನು ಆರಂಭವಾಗಲಿರುವ ಜನಗಣತಿಯ ಮಾಹಿತಿ ಪಡೆಯಲು 2030ರವರೆಗೆ ಕಾಯಬೇಕು ಆದರೆ, 2029ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಹೀಗಾಗಿ 2011ರ ಜನಗಣತಿಯ ದತ್ತಾಂಶದ ಆಧಾರದಲ್ಲಿಯೇ ಮಹಿಳಾ ಮೀಸಲಾತಿ ಕಾಯ್ದೆ ಜಾರಿ ಮಾಡುವುದು ಸರ್ಕಾರದ ಚಿಂತನೆ ಆದರೆ, ಅದಕ್ಕಾಗಿ ಸಂವಿಧಾನ ತಿದ್ದುಪಡಿಯ ಅಗತ್ಯವಿದೆ.
- ಈ ಮಸೂದೆಗಳು ಅಂಗೀಕಾರಗೊಂಡು ಕಾಯ್ದೆಗಳಾದರೆ, 2029ರ ಮಾರ್ಚ್ 31ರಿಂದ ಜಾರಿಗೆ ಬರಲಿವೆ. ಮುಂದಿನ ಲೋಕಸಭಾ ಚುನಾವಣೆ ಮತ್ತು ಒಡಿಶಾ, ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಕಾಯ್ದೆಗಳ ಪ್ರಯೋಜನ ಸಿಗಲಿದೆ.
- ಕ್ಷೇತ್ರ ಮರುವಿಂಗಡಣೆ ಮಹಿಳಾ ಮೀಸಲಾತಿ ಕಾಯ್ಕ ಜಾರಿಗೊಳಿಸುವುದರ ಜತೆಯಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳ ಕ್ಷೇತ್ರ ಮರುವಿಂಗಡಣೆ ಮಾಡುವುದು ಕೇಂದ್ರ ಸರ್ಕಾರದ ಚಿಂತನೆಯಾಗಿದೆ ಅದನ್ನು ಕ್ಷೇತ್ರ ಮರುವಿಂಗಡಣೆ ಅಥವಾ ಗಡಿ ಆಯೋಗವು ಮಾಡುತ್ತದೆ ಅದು ತಟಸ್ಕ ಸಂಸ್ಥೆಯಾಗಿದ್ದು, ಅದರ ತೀರ್ಮಾನಗಳನ್ನು ಸುಪ್ರೀಂ ಕೋರ್ಟ್ ನಲ್ಲಿಯೂ ಪ್ರಶ್ನಿಸಲಾಗುವುದಿಲ್ಲ.
- ಈ ಹಿಂದಿನ ಕ್ಷೇತ್ರ ಮರುವಿಂಗಡಣೆಯ ಸಂದರ್ಭದಲ್ಲಿ ಜನಸಂಖ್ಯೆಯನ್ನು ಆಧರಿಸಿ ಲೋಕಸಭೆ ಮತ್ತು ವಿಧಾನಭೆಗಳಲ್ಲಿ ಎಸ್ಸಿ ಎಸ್ಟಿ ಮೀಸಲಾತಿ ಕಲ್ಪಿಸಲಾಗಿತ್ತು ಮಹಿಳಾ ಮೀಸಲು ಕ್ಷೇತ್ರಗಳನ್ನು ಗುರುತಿಸಲೂ ಇದೇ ಮಾರ್ಗವನ್ನು ಅನುಸರಿಸುವ ಸಾಧ್ಯತೆ ಇದೆ. ಜತೆಗೆ, ಆವರ್ತನ ಪದ್ಮತಿಯ ಆಧಾರದಲ್ಲಿಯೂ ಮಹಿಳಾ ಮೀಸಲು ಕ್ಷೇತ್ರಗಳನ್ನು ನಿಗದಿಪಡಿಸಲು ಚಿಂತನೆ ನಡೆಸಲಾಗುತ್ತಿದೆ ಮಹಿಳಾ ಮೀಸಲು ಸ್ಥಾನಗಳಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಇರುತ್ತದೆ ಆದರೆ ಒಬಿಸಿ ಮೀಸಲಾತಿ ಇರುವುದಿಲ್ಲ, ಎನ್ನಲಾಗುತ್ತಿದೆ ಮಹಿಳಾ ಮೀಸಲಿನಲ್ಲಿ ಎಸ್ಸಿ ಎಸ್ಟಿ, ಒಬಿಸಿ ಮಹಿಳೆಯರಿಗೆ ಒಳಮೀಸಲಾತಿ ಕಲ್ಪಿಸಬೇಕು ಎನ್ನುವುದು ಪ್ರಬಲ ಒತ್ತಾಯವಾಗಿತ್ತು ಈ ಕಾರಣಕ್ಕೆ ಹಿಂದೆ ಹಲವು ಬಾರಿ ಸಂಸತ್ ನಲ್ಲಿ ಮಸೂದೆ ಅಂಗೀಕಾರಗೊಂಡಿರಲಿಲ್ಲ.

ಲಿಂಗತ್ವ ಅಲ್ಪ ಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಗೆ ಅಸ್ತು
ಸಂದರ್ಭ: ಲಿಂಗತ್ವ ಅಲ್ಪ ಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಗೆ ಲೋಕಸಭೆಯು ಅನುಮೋದನೆ ನೀಡಿತು.
- ಮಸೂದೆ ಬಗ್ಗೆ ಪ್ರತಿಕ್ರಿಯಿಸಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಅವರು, ‘ಲಿಂಗದ ಕಾರಣಕ್ಕಾಗಿಯೇ ಬಹಿಷ್ಕಾರದ ಶಿಕ್ಷೆಯನ್ನು ಎದುರಿಸುವವರನ್ನು ರಕ್ಷಿಸುವ ಉದ್ದೇಶವನ್ನು ಈ ಮಸೂದೆಯು ಹೊಂದಿದೆ’ ಎಂದು ಹೇಳಿದರು.
- ‘ಲಿಂಗತ್ಯ ಅಲ್ಪ ಸಂಖ್ಯಾತರಿಗೆ ಕಾನೂನಾತ್ಮಕ ಮಾನ್ಯತೆ ಮತ್ತು ರಕ್ಷಣೆಯನ್ನೂ ಒದಗಿಸಲಿದೆ’ ಎಂದು ಅವರು ಒತ್ತಿ ಹೇಳಿದರು.
- 2019ರ ಕಾನೂನು ಇಂಥವರ ವಿರುದ್ಧದ ದೌರ್ಜನ್ಯಕ್ಕೆ ಗರಿಷ್ಠ 2 ವರ್ಷ ಕಾರಾಗೃಹ ಶಿಕ್ಷೆ ನೀಡುವ ಅವಕಾಶ ನೀಡುತ್ತಿತ್ತು ತಿದ್ದುಪಡಿ ಮಸೂದೆಯು ಗರಿಷ್ಠ 14 ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲು ಅವಕಾಶ ನೀಡುತ್ತದೆ ಎಂದು ಹೇಳಿದರು.
- ಪ್ರಸ್ತಾವಿತ ಮಸೂದೆಯು ಲಿಂಗತ್ಯದ ಚಹರೆಗಳನ್ನು ನಿರ್ಣಯಿಸುವ ಹಕ್ಕನ್ನು ಕಸಿದುಕೊಳ್ಳಲಿದೆ ಇದನ್ನು ಸ್ಥಾಯಿ ಸಮಿತಿಗೆ ಕಳುಹಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.
ಪತ್ರಿಕೆ-IV: ಸಾಮಾನ್ಯ ಅಧ್ಯಯನ-3
ಸಾಮಾಜಿಕ ಜಾಲತಾಣ ನಿರ್ಬಂಧಿಸಲು ಶಾಲೆಗಳಲ್ಲಿ ಜಾಗೃತಿ ಜತೆಗೆ ತರಬೇತಿ: ಡಿಜಿಟಲ್ ಸಾಧನ ಬಳಕೆಗೆ ಕರಡು ನೀತಿ ಸಿದ್ಧ
ಸಂದರ್ಭ: ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಕ್ಕಳಲ್ಲಿ ಮಾನಸಿಕ ಅನಾರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಕಾರಣ, ರಾಜ್ಯ ಸರ್ಕಾರವು ಮಕ್ಕಳ ಜವಾಬ್ದಾರಿಯುತ ಡಿಜಿಟಲ್ ಬಳಕೆಗೆ ಕರಡು ನೀತಿ ರೂಪಿಸಿದೆ.

- ಡಿಜಿಟಲ್ ಸಾಧನಗಳ ಬಳಕೆ ಕುರಿತು ಜಾಗೃತಿ, ಶಿಕ್ಷಕರಿಗೆ ತರಬೇತಿ, ಡಿಜಿಟಲ್ ಕ್ಷೇಮ ಸಮಿತಿ ರಚನೆಯಂತಹ ಕ್ರಮಗಳನ್ನೂ ಸೂಚಿಸಲಾಗಿದೆ.
- ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ ಹಾಗೂ ನಿಮ್ಹಾನ್ಸ್ ತಜ್ಞರು ಪೋಷಕರ ಜತೆಗೆ ಸಮಾಲೋಚನೆ ನಡೆಸಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಕರಡು ನೀತಿ ರಚಿಸಿದ್ದಾರೆ. ಡಿಜಿಟಲ್ ಸಾಧನಗಳ ಬಳಕೆ ಮತ್ತು ಮಾನಸಿಕ ಅನಾರೋಗ್ಯ ಸಮಸ್ಯೆಗಳ ನಿರ್ವಹಣೆ ಬಗ್ಗೆ ಶಿಕ್ಷಣ ಸಂಸ್ಥೆಗಳು, ಶಿಕ್ಷಕರು ಹಾಗೂ ಪಾಲಕರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಉಲ್ಲೇಖಿಸಲಾಗಿದೆ.
- ‘ಮಾನಸಿಕ ಅನಾರೋಗ್ಯ ಸಮಸ್ಯೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಳವಾಗುತ್ತಿವೆ. ಅತಿಯಾದ ಮತ್ತು ಅನಿಯಂತ್ರಿತ ತಂತ್ರಜ್ಞಾನ ಬಳಕೆಯು ಇದಕ್ಕೆ ಪ್ರಮುಖ ಕಾರಣವಾಗಿದೆ. ಅಧ್ಯಯನಗಳ ಪ್ರಕಾರ, ಶೇ 25ರಷ್ಟು ಹದಿಹರೆಯದವರು ಸಾಮಾಜಿಕ ಜಾಲತಾಣಗಳ ವ್ಯಸನಿಗಳಾಗಿದ್ದಾರೆ. ಅವರಲ್ಲಿ ಅನೇಕರು ಆತಂಕ, ಉದ್ವಿಗ್ನತೆ, ನಿದ್ರಾಹೀನತೆ ಹಾಗೂ ಏಕಾಗ್ರತೆ ಕೊರತೆಯಂತಹ ಸಮಸ್ಯೆ ಎದುರಿಸುತ್ತಿದ್ದಾರೆ ಆದ್ದರಿಂದ ಡಿಜಿಟಲ್ ಸಾಧನಗಳ ಅತಿಯಾದ ಬಳಕೆ ಮತ್ತು ಅವುಗಳಿಂದ ಉಂಟಾಗುವ ಮಾನಸಿಕ ಸಮಸ್ಯೆಗಳನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಬೇಕಿದೆ. ಮಕ್ಕಳಲ್ಲಿ ಆರೋಗ್ಯಕರ ಮತ್ತು ಸಮತೋಲಿತ ತಂತ್ರಜ್ಞಾನ ಅಭ್ಯಾಸ ಉತ್ತೇಜಿಸಬೇಕಿದೆ. ಹಾಗಾಗಿ, ಶಿಕ್ಷಕರು ಮತ್ತು ಪೋಷಕರ ತರಬೇತಿ ಕಾರ್ಯಕ್ರಮ ತುರ್ತು ಅಗತ್ಯ’ ಎಂದು ಕರಡು ನೀತಿಯಲ್ಲಿ ತಿಳಿಸಲಾಗಿದೆ.
- ಡಿಜಿಟಲ್ ಸಾಕ್ಷರತೆ ಶಾಲಾ ಪಠ್ಯಕ್ರಮದಲ್ಲಿ ಡಿಜಿಟಲ್ ಸಾಕ್ಷರತೆ ಅಳವಡಿಕೆ ಬಗ್ಗೆಯೂ ಸೂಚಿಸಲಾಗಿದೆ. ಸಕಾರಾತ್ಮಕ ಡಿಜಿಟಲ್ ಅಭ್ಯಾಸ, ಆನ್ಲೈನ್ ಶಿಷ್ಟಾಚಾರ, ಅಂತರ್ಜಾಲ ತಾಣಗಳ ಸುರಕ್ಷಿತ ಬಳಕೆಯ ಬಗ್ಗೆ, ವಯಸ್ಸಿಗೆ ಅನುಗುಣವಾಗಿ ತಿಳಿಸುವಿಕೆ, ವಿದ್ಯಾರ್ಥಿಗಳಲ್ಲಿನ ಆತಂಕ, ಒತ್ತಡ ಹಾಗೂ ಅಧ್ಯಯನ ಸಾಮರ್ಥ್ಯ ಕುಂಠಿತವಾಗುವ ಬಗ್ಗೆ ಜಾಗೃತಿ ಮೂಡಿಸುವಿಕೆಯಂತಹ ಕ್ರಮಗಳ ಬಗ್ಗೆ ಕರಡು ನೀತಿಯಲ್ಲಿ ಹೇಳಲಾಗಿದೆ.
- ಪ್ರತಿಯೊಂದು ಶಾಲೆಯೂ ಡಿಜಿಟಲ್ ಸಾಧನಗಳ ಬಳಕೆ ಬಗ್ಗೆ, ನೀತಿ ರೂಪಿಸಿ, ಜಾರಿಗೊಳಿಸಬೇಕೆಂದು ಸೂಚಿಸಲಾಗಿದೆ ಡಿಜಿಟಲ್ ಸಾಧನಗಳ ಬಳಕೆ ಮೇಲೆ ನಿಗಾ ಇಡುವ ಜತೆಗೆ, ಶಾಲಾ ಕೆಲಸದ ಹೊರತಾಗಿ ಡಿಜಿಟಲ್ ಸಾಧನಗಳ ಬಳಕೆಯ ಅವಧಿಯನ್ನು ದಿನಕ್ಕೆ ಒಂದು ಗಂಟೆಗೆ ನಿಗದಿಪಡಿಸಬೇಕು ಎಂದು ಹೇಳಲಾಗಿದೆ ವಿದ್ಯಾರ್ಥಿಗಳನ್ನು ವಾಟ್ಸ್ಆ್ಯಪ್ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸುವ ಬದಲು ಮೊದಲಿನಂತೆ ದಿನಚರಿ ವ್ಯವಸ್ಥೆ (ಡೈರಿ) ಮೂಲಕ ಸಂಪರ್ಕಿಸಬೇಕು ಎಂದು ತಿಳಿಸಲಾಗಿದೆ
ಪತ್ರಿಕೆ-V: ಸಾಮಾನ್ಯ ಅಧ್ಯಯನ-4
Sources: Prajavani