ಪೂರ್ವಭಾವಿ ಪರೀಕ್ಷೆ
ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
ದಾಖಲೆ ಬರೆದ ಪ್ರಧಾನಿ ಮೋದಿ
ಸಂದರ್ಭ: ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿ 8931 ದಿನಗಳನ್ನು ಪೂರೈಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ ದಾಖಲೆ ಬರೆದಿದ್ದಾರೆ.

- ಪವನ್ ಕುಮಾರ್ ಚಾಮ್ಮಿಂಗ್ ಅವರು ಸಿಕ್ಕಿಂ ಮುಖ್ಯಮಂತ್ರಿಯಾಗಿ 8930 ದಿನ ಪೂರೈಸುವ ಮೂಲಕ ದೇಶದಲ್ಲಿಯೇ ದೀರ್ಘಾವಧಿಗೆ ಸರ್ಕಾರದ ಮುಖ್ಯಸ್ಥರಾಗಿದ್ದ ಖ್ಯಾತಿ ಹೊಂದಿದ್ದರು. ಇದೀಗ ಮೋದಿ ಅವರು ಚಾಮಿಂಗ್ ದಾಖಲೆಯನ್ನು ಮುರಿದಿದ್ದಾರೆ.
ಭಾರತದ ಸುದೀರ್ಘ ಅವಧಿಯ ಸರ್ಕಾರದ ಮುಖ್ಯಸ್ಥರು (CM ಮತ್ತು PM)
| ಶ್ರೇಣಿ | ನಾಯಕರ ಹೆಸರು | ಒಟ್ಟು ದಿನಗಳು | ರಾಜ್ಯ / ಕೇಂದ್ರಾಡಳಿತ ಪ್ರದೇಶ |
| 1 | ನರೇಂದ್ರ ಮೋದಿ | 8,931+ | ಗುಜರಾತ್ (ಸಿಎಂ ಆಗಿ) ಮತ್ತು ಭಾರತ (ಪಿಎಂ ಆಗಿ) |
| 2 | ಪವನ್ ಕುಮಾರ್ ಚಾಮ್ಲಿಂಗ್ | 8,930 | ಸಿಕ್ಕಿಂ |
| 3 | ನವೀನ್ ಪಟ್ನಾಯಕ್ | 8,800+ | ಒಡಿಶಾ |
| 4 | ಜ್ಯೋತಿ ಬಸು | 8,539 | ಪಶ್ಚಿಮ ಬಂಗಾಳ |
| 5 | ಗೆಗಾಂಗ್ ಅಪಾಂಗ್ | 8,156 | ಅರುಣಾಚಲ ಪ್ರದೇಶ |
| 6 | ಲಾಲ್ ತನ್ಹಾವ್ಲಾ | 7,746 | ಮಿಜೋರಾಂ |
| 7 | ವೀರಭದ್ರ ಸಿಂಗ್ | 7,642 | ಹಿಮಾಚಲ ಪ್ರದೇಶ |
| 8 | ಮಾಣಿಕ್ ಸರ್ಕಾರ್ | 7,300 | ತ್ರಿಪುರಾ |
| 9 | ಎಂ. ಕರುಣಾನಿಧಿ | 6,863 | ತಮಿಳುನಾಡು |
| 10 | ಪ್ರಕಾಶ್ ಸಿಂಗ್ ಬಾದಲ್ | 6,835 | ಪಂಜಾಬ್ |
ಕರ್ನಾಟಕದ ಸುದೀರ್ಘ ಅವಧಿಯ ಮುಖ್ಯಮಂತ್ರಿಗಳು
| ಶ್ರೇಣಿ | ಹೆಸರು | ಅಧಿಕಾರದಲ್ಲಿದ್ದ ಒಟ್ಟು ದಿನಗಳು | ಆಡಳಿತದ ಮುಖ್ಯಾಂಶಗಳು |
| 1 | ಡಿ. ದೇವರಾಜ್ ಅರಸು | 2,907 | ಭೂ ಸುಧಾರಣೆ ಮತ್ತು ಸಾಮಾಜಿಕ ನ್ಯಾಯದ ಹರಿಕಾರ; ಎರಡು ಅವಧಿಗೆ ಸೇವೆ (1972-77 ಮತ್ತು 1978-80). |
| 2 | ಎಸ್. ನಿಜಲಿಂಗಪ್ಪ | 2,739 | ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ; ಮೂರು ಪ್ರತ್ಯೇಕ ಅವಧಿಗಳಲ್ಲಿ ಸೇವೆ (1956-58, 1962-67, 1967-68). |
| 3 | ಸಿದ್ದರಾಮಯ್ಯ | 2,870+ (ಮುಂದುವರಿಯುತ್ತಿದೆ) | ಪೂರ್ಣ 5 ವರ್ಷಗಳ ಅವಧಿ (2013-18) ಪೂರೈಸಿದವರು ಮತ್ತು ಪ್ರಸ್ತುತ ಎರಡನೇ ಅವಧಿಗೆ (2023–ಪ್ರಸ್ತುತ) ಸೇವೆ ಸಲ್ಲಿಸುತ್ತಿದ್ದಾರೆ. |
| 4 | ರಾಮಕೃಷ್ಣ ಹೆಗಡೆ | 2,036 | ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ; 1983 ಮತ್ತು 1988 ರ ನಡುವೆ ಮೂರು ಅವಧಿಗಳಲ್ಲಿ ಸೇವೆ. |
| 5 | ಬಿ. ಎಸ್. ಯಡಿಯೂರಪ್ಪ | 1,911 | ನಾಲ್ಕು ಪ್ರತ್ಯೇಕ ಅವಧಿಗಳಲ್ಲಿ ಸೇವೆ; ಕರ್ನಾಟಕದಲ್ಲಿ ಅತಿ ಹೆಚ್ಚು ಬಾರಿ (4 ಬಾರಿ) ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ದಾಖಲೆ. |
| 6 | ಎಸ್. ಎಂ. ಕೃಷ್ಣ | 1,659 | ಬೆಂಗಳೂರಿನ “ಐಟಿ/ಬಿಟಿ (IT/BT) ಕ್ರಾಂತಿ”ಯ ರೂವಾರಿ ಎಂದು ಪರಿಗಣಿಸಲಾಗುತ್ತದೆ (1999-2004). |
ವಿಶ್ವ ಒಳಾಂಗಣ ಅಥ್ಲೆಟಿಕ್ಸ್‌ನಲ್ಲಿ ಸತತ ನಾಲ್ಕನೇ ಚಿನ್ನ: ಪೋಲ್‌ವಾಲ್ಟ್: ಡುಪ್ಲಾಂಟಿಸ್ ದಾಖಲೆ
ಸಂದರ್ಭ: ಟೊರುನ್ (ಪೋಲೆಂಡ್) ಪೋಲ್ ವಾಲ್ಸ್ ತಾರೆ ಅರ್ಮಾಂಡ್ ಡುಪ್ಯಾಂಟಿಸ್ ಅವರು ವಿಶ್ವ ಒಳಾಂಗಣ ಅಥ್ಲೆಟಿಕ್ಸ್‌ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.

- ಸ್ವೀಡನ್ ಡುಪ್ಲಾಂಟಿಸ್ 6.25 ಮೀಟರ್ ಎತ್ತರ ಜಿಗಿದರು ವರ್ಷದ ಹಿಂದೆ ನಾನ್‌ಜಿಂಗ್‌ನಲ್ಲಿ ತೋರಿದ ಸಾಧನೆಗಿಂತ 10 ಸೆಂಟಿಮೀಟರ್ ಎತ್ತರ ಜಿಗಿದು, ತನ್ನದೇ ದಾಖಲೆಯನ್ನು ಉತ್ತಮ ಪಡಿಸಿಕೊಂಡರು. ಈ ಮೂಲಕ ವಿಶ್ವ ಒಳಾಂಗಣ ಕೂಟದಲ್ಲಿ ಸತತ ನಾಲ್ಕನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
- 26 ವರ್ಷದ ಡುಪ್ಲಾಂಟಿಸ್ ಕ್ರಮವಾಗಿ 6.10, 6.15 ಮತ್ತು 6.25 ಮೀಟರ್ ಎತ್ತರವನ್ನು ಯಶಸ್ವಿಯಾಗಿ ದಾಟಿದರು. ಗ್ರೀಸ್‌ನ ಇಮ್ಯಾನುವಲ್ ಕರಾಲಿಸ್ ಅವರು 6.15 ಮೀಟರ್ ಜಿಗಿದು ಸತತ ಎರಡನೇ ಬಾರಿ ಬೆಳ್ಳಿ ತಮ್ಮದಾಗಿಸಿಕೊಂಡರು.
- ಡುಪ್ಪಾಂಟಿನ್ ಮಾರ್ಚ್ 12ರಂದುಮೊಂಡೊ ಕ್ಲಾಸಿಕ್ ಕೂಟದಲ್ಲಿ 6.31 ಮೀ. ಸಾಧನೆಯೊಂದಿಗೆ ವಿಶ್ವದಾಖಲೆ ನಿರ್ಮಿಸಿದ್ದರು ಅದನ್ನು ಮುರಿಯುವ ಪ್ರಯತ್ನ (6.32 ಮೀ.) ಇಲ್ಲಿ ನಡೆಸಿದರು. ಆದರೆ, ಅದು ಸಾಧ್ಯವಾಲಿಲ್ಲ.
- ಆಸ್ಟ್ರೇಲಿಯಾದ ಕುರ್ಟಿಸ್ ಮಾರ್ಷಲ್ ವೈಯಕ್ತಿಕ ಅತ್ಯುತ್ತಮ 6 ಮೀಟರ್ ಸಾಧನೆಯೊಂದಿಗೆ ಮೂರನೇ ಸ್ನಾನ ಪಡೆದರು. ಕೂಟದ ಇತಿಹಾಸದಲ್ಲಿ ಮೊದಲ ಬಾರಿಗೆ ಮೂರು ಸ್ಪರ್ಧಿಗಳು ಆರು ಮೀಟರ್ ಗಡಿ ದಾಟಿದರು.
- ಸ್ವಿಟ್ಸರ್ಲೆಂಡ್‌ನ ಸೈಮನ್ ಹ್ಯಾಮರ್ ವಿಶ್ವದಾಖಲೆಯ ಅಂಕ (6,670) ಗಳಿಸಿ ಹೆಪ್ಪಾಥಾನ್ ಪ್ರಶಸ್ತಿ ಗೆದ್ದರು. 2012ರಲ್ಲಿ ಅಮೆರಿಕದ ಆತ್ಮನ್ ಈಟನ್ (6645) ನಿರ್ಮಿಸಿದ ದಾಖಲೆಯನ್ನು ಸೈಮನ್ ಮುರಿದರು.
ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
‘ತೇಜಸ್ವಿನಿಗೆ ‘ಅಕ್ಕ ಪ್ರಶಸ್ತಿ’
ಸಂದರ್ಭ: ಮಹಾಲಿಂಗಪುರ (ಬಾಗಲಕೋಟಿ ಜಿಲ್ಲೆ) ಸಮೀಪದ ಚಿಮ್ಮಡ ಗ್ರಾಮದ ವಿರಕ್ತಮಠದಿಂದ ಅಕ್ಕ ಮಹಾದೇವಿ ಜಯಂತಿ ಅಂಗವಾಗಿ ಪ್ರತಿ ವರ್ಷ ನೀಡುವ ರಾಜ್ಯಮಟ್ಟದ ‘ಅಕ್ಕ ಪ್ರಶಸ್ತಿ’ಗೆ ಕೇಂದ್ರದ ಮಾಜಿ ಸಚಿವ ದಿ.ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಭಾಜನರಾಗಿದ್ದಾರೆ.

- ತೇಜಸ್ವಿನಿ ಅನಂತಕುಮಾರ್ ಅವರ ಸಾಮಾಜಿಕ ಸೇವೆ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಏ.2ರಂದು ಶ್ರೀಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿರಕ್ತಮಠದ ಪ್ರಭು ಸ್ವಾಮೀಜಿ ತಿಳಿಸಿದ್ದಾರೆ.
ಮುಖ್ಯ ಪರೀಕ್ಷೆ
ಪತ್ರಿಕೆ-I: ಪ್ರಬಂಧಗಳು
ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ
“ಭಾರತದ ವಿದೇಶಾಂಗ ನೀತಿಯಲ್ಲಿ ಪಶ್ಚಿಮ ಏಷ್ಯಾದೊಂದಿಗಿನ ಸಂಬಂಧವು ಅತ್ಯಂತ ಕಾರ್ಯತಂತ್ರದ ಆದ್ಯತೆಗಳಲ್ಲಿ ಒಂದಾಗಿದೆ. ಇದು ಇಂಧನ ಅವಲಂಬನೆ, ಅನಿವಾಸಿ ಭಾರತೀಯರ ಸಂಬಂಧಗಳು, ವ್ಯಾಪಾರ ಮತ್ತು ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಸವಾಲುಗಳಿಂದ ರೂಪಿತವಾಗಿದೆ. ಗಲ್ಫ್ ರಾಷ್ಟ್ರಗಳೊಂದಿಗಿನ ಆರ್ಥಿಕ ಸಹಕಾರ, ಇರಾನ್ ಮತ್ತು ಇರಾಕ್‌ನೊಂದಿಗಿನ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಬಂಧಗಳು ಮತ್ತು ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ನಡುವಿನ ಸೂಕ್ಷ್ಮ ರಾಜತಾಂತ್ರಿಕತೆಯನ್ನು ಭಾರತವು ಹೇಗೆ ಸಮತೋಲನಗೊಳಿಸುತ್ತದೆ ಎಂಬುದನ್ನು ಚರ್ಚಿಸಿ.”
ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ
“ಮಹದಾಯಿ ಜಲ ವಿವಾದ: ಕರ್ನಾಟಕದ ಅಭಿವೃದ್ಧಿ ಅಗತ್ಯಗಳನ್ನು ಪರಿಸರ ಮತ್ತು ಅಂತರರಾಜ್ಯ ಕಾಳಜಿಗಳೊಂದಿಗೆ ಸಮತೋಲನಗೊಳಿಸುವುದು”
ಪತ್ರಿಕೆ-II: ಸಾಮಾನ್ಯ ಅಧ್ಯಯನ-1
ಪತ್ರಿಕೆ-III: ಸಾಮಾನ್ಯ ಅಧ್ಯಯನ-2
ನಿಷೇಧ: ಆರು ವರ್ಷ ಹಲವು ಕಾಯ್ದೆ
ಮೌಡ್ಯ
- ರಾಜ್ಯದಲ್ಲಿರುವ ಅಮಾನವೀಯ ಆಚರಣೆಗಳು, ಮಾಟ-ಮಂತ್ರ ಮತ್ತು ವಾಮಾಚಾರ ಇನ್ನಿತರ ಮೌಡ್ಯದ ಆಚರಣೆಗಳನ್ನು ತಡೆಗಟ್ಟುವ ಉದ್ದೇಶದಿಂದ ‘ಮೌಡ್ಯ ನಿಷೇಧ ಕಾಯ್ದೆ-2020 (ಮೌಡ್ಯ ನಿರ್ಬಂಧ ಮತ್ತು ನಿರ್ಮೂಲನಾ ಕಾಯ್ದೆ) ಅನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಇದರ ಪ್ರಕಾರ, ಮಡೆಸ್ನಾನ, ಬೆತ್ತಲೆ ಮೆರವಣಿಗೆ ಮತ್ತು ದೈಹಿಕ ಹಿಂಸೆ ನೀಡುವ ಮೂಢನಂಬಿಕೆಗಳನ್ನು ಪಾಲಿಸುವುದು ಶಿಕ್ಷಾರ್ಹ ಅಪರಾಧ. ಸಮಾಜದಲ್ಲಿ ಶೋಷಣೆಗೆ ಕಾರಣವಾಗುವ ಅನಿಷ್ಟ ಆಚರಣೆಗಳನ್ನು ಮಾತ್ರ ಕಾಯ್ದೆ ನಿಷೇಧಿಸುತ್ತದೆ.
- ದೇವಸ್ಥಾನ, ಮಸೀದಿ, ಚರ್ಚ್ ಇತ್ಯಾದಿಗಳಲ್ಲಿ ನಡೆಯುವ ಸಾಂಪ್ರದಾಯಿಕ ಪೂಜೆಗಳು ಮತ್ತು ಧಾರ್ಮಿಕ ಆಚರಣೆಗಳಿಗೆ ಯಾವುದೇ ಅಡ್ಡಿ ಇಲ್ಲ. ಆದರೆ ದೈಹಿಕ ಹಿಂಸೆ ಇರಬಾರದು. ಸಮಾಜದಲ್ಲಿ ಆಜ್ಞಾನದಿಂದ ನಡೆಯುವ ಶೋಷಣೆಯನ್ನು ತಡೆಯುವುದು ಮತ್ತು ವೈಜ್ಞಾನಿಕ ಮನೋಭಾವವನ್ನು ಮೂಡಿಸುವುದು; ದುರ್ಬಲ ವರ್ಗದವರನ್ನು ಮಹಿಳೆಯರನ್ನು ಮತ್ತು ಹಿಂದುಳಿದವರನ್ನು ಮೌಢಾಚರಣೆಗಳ ಹೆಸರಿನಲ್ಲಿ ನಡೆಯುವ ಶೋಷಣೆಯಿಂದ ರಕ್ಷಿಸುವ ಗುರಿಯನ್ನು ಹೊಂದಿದೆ.
- 2017ರಲ್ಲಿ ಕಾಂಗ್ರೆಸ್ ಸರ್ಕಾರ ಈ ಮಸೂದೆಯನ್ನು ರೂಪಿಸಿತ್ತು. ಕಾಯ್ದೆ ಜಾರಿಗೆ ಅಧಿಸೂಚನೆಯನ್ನೂ ಹೊರಡಿಸಿತ್ತು ನಂತರ ತಾಂತ್ರಿಕ ಕಾರಣಕ್ಕಾಗಿ ವಾಪಸ್ ಪಡೆಯಲಾಗಿತ್ತು ನಂತರ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಸರ್ಕಾರ 2020ರ ಜನವರಿಯಲ್ಲಿ ಈ ಕಾಯ್ದೆ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿತು.
ಮತಾಂತರ
- ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಜಾರಿಗೆ ತಂದಿರುವ ಪ್ರಮುಖ ಕಾನೂನುಗಳ ಪೈಕಿ ಪ್ರಮುಖವಾದುದು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಕಾಯ್ದೆ.
- 2021ರ ಡಿಸೆಂಬರ್‌ನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಮಸೂದೆಯನ್ನು ಮಂಡಿಸಲಾಗಿತ್ತು. ವಿಧಾನಸಭೆಯ ಅಂಗೀಕಾರವೂ ದೊರಕಿತ್ತು. ಆದರೆ, ವಿಧಾನ ಪರಿಷತ್‌ನಲ್ಲಿ ಸದಸ್ಯಬಲದ ಕೊರತೆಯಿಂದ ಮಸೂದೆ ಮಂಡಿಸಿರಲಿಲ್ಲ. ಸುಗ್ರೀವಾಜ್ಞೆ ಮೂಲಕ ಮಸೂದೆಯನ್ನು ಜಾರಿಗೊಳಿಸಲಾಗಿತ್ತು.
- ತಿಂಗಳುಗಳ ಬಳಿಕ ಮೇಲ್ಮನೆಯಲ್ಲಿ ಮತ್ತೆ ಅಂಗೀಕಾರ ಪಡೆಯಲಾಗಿತ್ತು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು 2022ರ ಸೆಪ್ಟೆಂಬರ್‌ನಲ್ಲಿ ಅಂಕಿತ ಹಾಕಿದ್ದರು.
- ಈ ಕಾಯ್ದೆಗೆ ಕ್ರೈಸ್ತರು ಸೇರಿದಂತೆ ಹಲವು ಸಮುದಾಯಗಳಿಂದ ವಿರೋಧ ವ್ಯಕ್ತವಾಗಿತ್ತು. ಇದು ಸಂವಿಧಾನ ನೀಡುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂಬ ಆರೋಪವೂ ಕೇಳಿಬಂದಿತ್ತು.
- ‘ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಜಾರಿಗೆ ತಂದಿದ್ದ ಈ ಕಾಯ್ದೆಯು ದೇಶದ ವಿವಿಧ ಭಾಗಗಳಲ್ಲಿ ಕ್ರೈಸ್ತರ ಮೇಲೆ ದಾಳಿ ಮಾಡುವಂತೆ ಪ್ರೇರೇಪಿಸಿತ್ತು’ ಎಂದು ಕರ್ನಾಟಕ ಪ್ರಾಂತ್ಯ ಕ್ಯಾಥೋಲಿಕ್ ಧರ್ಮಾಧ್ಯಕ್ಷರ ಮಂಡಳಿ, ಅಖಿಲ ಕರ್ನಾಟಕ ಕ್ರೈಸ್ತ ಮಾನವ ಹಕ್ಕುಗಳ ಒಕ್ಕೂಟ ವೇದಿಕೆ ಆರೋಪಿಸಿದವು.
- 2023ರ ಚುನಾವಣೆಗೂ ಮುನ್ನ, ತಾನು ಅಧಿಕಾರಕ್ಕೆ ಬಂದರೆ ಈ ಕಾಯ್ದೆಯನ್ನು ರದ್ದುಪಡಿಸುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ, ಈವರೆಗೂ ಸರ್ಕಾರ ಕಾಯ್ದೆ ರದ್ದುಗೊಳಿಸಿಲ್ಲ. ಕಾಯ್ದೆ ದುರುಪಯೋಗಪಡಿಸಿಕೊಂಡು ಕ್ರೈಸ್ತರ ಮೇಲೆ ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದು ಕ್ರೈಸ್ತ ಸಂಘಟನೆಗಳು ಆರೋಪಿಸುತ್ತಿವೆ.
ಜಾನುವಾರು ಹತ್ಯೆ
- ರಾಜ್ಯದಲ್ಲಿ ಜಾನುವಾರುಗಳ ಹತ್ಯೆಯನ್ನು ತಡೆಯುವ ಉದ್ದೇಶದಿಂದ 2020ರಲ್ಲಿ ಹಿಂದಿನ ಬಿಜೆಪಿ ಸರ್ಕಾರ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿತು ಗೋಹತ್ಯೆ ನಿಷೇಧ ಕಾಯ್ದೆ ಎಂದೂ ಇದು ಪ್ರಚಲಿತದಲ್ಲಿದೆ ಜಾನುವಾರಗಳ ಕಳ್ಳಸಾಗಣೆ, ಅವುಗಳ ಹತ್ಯೆಯನ್ನು ತಪ್ಪಿಸುವುದರ ಜೊತೆಗೆ ಅವುಗಳ ಸಂರಕ್ಷಣೆಗೂ ಒತ್ತು ಕೊಡುವ ಅಂಶಗಳು ಕಾಯ್ದೆಯಲ್ಲಿವೆ ಜಾನುವಾರುಗಳ ಸಾಗಣೆಗೆ ಕಠಿಣ ನಿಯಮಗಳನ್ನೂ ಈ ಕಾಯ್ದೆಯಡಿ ರೂಪಿಸಲಾಗಿದೆ ರೈತರು ಅವರ ಜಾನುವಾರುಗಳನ್ನು ಸಾಗಿಸುವುದಕ್ಕೂ ಇದರ ನಿಯಮಗಳು ಅನ್ವಯವಾಗುತ್ತವೆ ರೈತರ ಹಿತದೃಷ್ಟಿಯಿಂದ ಹಾಗೂ ಗೋವುಗಳ ಆರೋಗ್ಯ ಮತ್ತು ಮಾಂಸಕ್ಕಾಗಿ ಅವುಗಳ ಹತ್ಯೆಯನ್ನು ತಡೆಯುವ ಉದ್ದೇಶದಿಂದ ಕಾಯ್ದೆ ರೂಪಿಸಲಾಗಿದೆ ಎಂದು ಹಿಂದಿನ ಸರ್ಕಾರ ಹೇಳಿಕೊಂಡಿತ್ತು.
- ರಾಜ್ಯದಲ್ಲಿ ಪರ ವಿರೋಧ ಚರ್ಚೆಯನ್ನು ಹುಟ್ಟುಹಾಕಿದ್ದ ಈ ಕಾನೂನನ್ನು ಪರಿಣಾ ಮಕಾರಿಯಾಗಿ ಜಾರಿಗೊಳಿಸಲು ಮತ್ತು ಜಾನುವಾರುಗಳ ಮೇಲೆ ನಡೆಯುವ ಕ್ರೌರ್ಯ ಮತ್ತು ಹಿಂಸೆ ತಡೆಗಟ್ಟಲು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪಿಸಲಾಗಿತ್ತು.
- ವಿರೋಧ ಪಕ್ಷದಲ್ಲಿದ್ದಾಗ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ನಂತರ ಈ ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನಿಸಿತ್ತು 2025ರ ಡಿಸೆಂಬರ್ನಲ್ಲಿ ಸಚಿವ ಸಂಪುಟ ಸಭೆ ಕೂಡ ತಿದ್ದುಪಡಿ ಮಸೂದೆ ಮಂಡನೆಗೆ ಒಪ್ಪಿಗೆ ಸೂಚಿಸಿತ್ತು ಬಿಜೆಪಿ, ವಿಎಚ್‌ಪಿ, ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳು ತಿದ್ದುಪಡಿ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದವು ಚಳಿಗಾಲದ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಯನ್ನು ಮಂಡಿಸುವ ಬಗ್ಗೆಯೂ ಚರ್ಚೆಯಾಗಿತ್ತು ಆದರೆ, ಸರ್ಕಾರ ಮಸೂದೆ ಮಂಡಿಸಿಲ್ಲ. ಕಾಯ್ದೆಯನ್ನು ರದ್ದುಪಡಿಸುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಇತ್ತೀಚೆಗೆ ಹೇಳಿದ್ದಾರೆ.
ಸಾಮಾಜಿಕ ಬಹಿಷ್ಕಾರ
- ರಾಜ್ಯದ ವಿವಿಧ ಕಡೆಗಳಲ್ಲಿ ಚಾಲ್ತಿಯಲ್ಲಿರುವ ಸಾಮಾಜಿಕ ಬಹಿಷ್ಕಾರ ಎಂಬ ಅನಿಷ್ಟ ಪದ್ಧತಿಯನ್ನು ಸಂಪೂರ್ಣ ನಿಷೇಧಿಸುವುದಕ್ಕಾಗಿ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧಕ, ನಿಷೇಧ ಮತ್ತು ಪರಿಹಾರ) ಕಾಯ್ದೆ-2025 ಅನ್ನು ರಾಜ್ಯ ಸರ್ಕಾರ ಈ ವರ್ಷದ ಜನವರಿಯಲ್ಲಿ ಜಾರಿಗೆ ತಂದಿದೆ. ಈ ಕಾಯ್ದೆಯು ಸಾಮಾಜಿಕ ಬಹಿಷ್ಕಾರವನ್ನು ಅಪರಾಧ ಎಂದು ಪರಿಗಣಿಸುತ್ತದೆ. ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ ಮೂರು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ₹1 ಲಕ್ಷ ದಂಡ ವಿಧಿಸುವುದಕ್ಕೆ ಈ ಕಾನೂನು ಅವಕಾಶ ನೀಡುತ್ತದೆ.
- ಬಹಿಷ್ಕರಿಸುವ ತೀರ್ಮಾನ ತೆಗೆದುಕೊಳ್ಳುವುದು, ಈ ಉದ್ದೇಶದಿಂದ ಸಭೆ, ವಂಚಾಯಿತಿ ಜಮಾವಣೆ, ಅಭಿಪ್ರಾಯ ಸಂಗ್ರಹಿಸುವುದು, ಬಹಿಷ್ಕಾರಕ್ಕೆ ಪ್ರತ್ಯಕ್ಷ ಪರೋಕ್ಷ ಸಹಾಯ, ಒತ್ತಡ, ಪ್ರಚೋದನೆ ನೀಡುವವರನ್ನೂ ಅಪರಾಧಿಗಳೆಂದು ಪರಿಗಣಿಸಿ ಜೈಲು ಅಥವಾ ದಂಡ ಅಥವಾ ಎರಡನ್ನೂ ವಿಧಿಸಲೂ ಈ ಕಾಯ್ಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
- ಈ ಕಾಯ್ಕೆಯ ಅನ್ಯಾಯ ಬಹಿಷ್ಕಾರಕ್ಕೆ ಒಳಗಾದವರು ಪೊಲೀಸರಿಗೆ ಅಥವಾ ನ್ಯಾಯಾಧೀಶರಿಗೆ ದೂರು ನೀಡಬಹುದು ಪ್ರಥಮ ದರ್ಜೆ ನ್ಯಾಯಾಧೀಶರಿಗೆ ವಿಚಾರಣೆಯ ಅಧಿಕಾರ ನೀಡಲಾಗಿದೆ. ನೇರವಾಗಿ ಸಲ್ಲಿಕೆಯಾದ ದೂರಿನ ತನಿಖೆ ನಡೆಸುವಂತೆ ನ್ಯಾಯಾಧೀಶರು ಆದೇಶ ನೀಡಬಹುದು ಸಂತ್ರಸ್ತರಿಗೆ ಸಹಾಯ ಒದಗಿಸಲು ಮತ್ತು ದಂಡದ ಮೊತ್ತವನ್ನು ಪರಿಹಾರವಾಗಿ ನೀಡಲು ನಿರ್ದೇಶನ ನೀಡಬಹುದು. ಸಾಮಾಜಿಕ ಬಹಿಷ್ಕಾರದಂತಹ ನಿರ್ಧಾರ ತೆಗೆದುಕೊಳ್ಳಲು ನಡೆಸುವ ಸಭೆಗಳ ಕುರಿತು ಮಾಹಿತಿ ಬಂದರೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ನಿಷೇಧಿಸಿ ಆದೇಶಿಸಬಹುದು ಮರ್ಯಾದೆಗೇಡು ಹತ್ಯೆ
- ಬೇರೆ ಜಾತಿಯವರನ್ನು ಪ್ರೀತಿಸಿ ಮದುವೆಯಾದವರನ್ನು ಮರ್ಯಾದೆ ಹೆಸರಿನಲ್ಲಿ ಹಲ್ಲೆ ಹತ್ಯೆ ಮಾಡುವ ಹಾಗೂ ಬಹಿಷ್ಕರಿಸುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವ ಉದ್ದೇಶದ ಇವ ನಮ್ಮವ ಇವ ನಮ್ಮವ ಮಸೂದೆಯನ್ನು ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದೆ.
- ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮರ್ಯಾದೆಗೇಡು ಹತ್ಯೆ ಹೆಸರಿನಲ್ಲಿ ನಡೆದ ಕೊಲೆ, ದೌರ್ಜನ್ಯಗಳ ತಡೆಗೆ ಕಠಿಣ ಕಾನೂನು ತರಬೇಕೆಂದು ನಾಗರಿಕರು, ವಿವಿಧ ಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ಹೇರಿದ್ದವು.
- ಕಾಯ್ದೆ ರೂಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಭರವಸೆಯಂತೆ ‘ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ಮಸೂದೆ-2026 ಸಿದ್ಧಪಡಿಸಲಾಗಿದ್ದು, ಈಚೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ.
- ಅಂತರ್ಜಾತಿ ವಿವಾಹಗಳನ್ನು ಮಾನ್ಯ ಮಾಡುವುದು, ಅಂತಹ ಮದುವೆಯಾದವರಿಗೆ ತಾರತಮ್ಯ ಮಾಡುವುದರ ವಿರುದ್ಧ ರಕ್ಷಣೆ ಒದಗಿಸುವುದು, ಮರ್ಯಾದೆ ಅಥವಾ ಸಂಪ್ರದಾಯದ ಹೆಸರಿನಲ್ಲಿ ದೌರ್ಜನ್ಯ ಎಸಗುವ, ಹತ್ಯೆ ಮಾಡುವ ಕೃತ್ಯಗಳನ್ನು ತಡೆಯುವುದು, ಮೇಲ್ವಿಚಾರಣಾ ಸಮಿತಿಗಳನ್ನು ರಚಿಸುವುದು, ಪ್ರತಿ ಜಿಲ್ಲೆಯಲ್ಲೂ ‘ಇವ ನಮ್ಮವ’ ವೇದಿಕೆಗಳನ್ನು ರಚಿಸುವುದು, ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವುದು, ಅಪರಾಧಿಗಳಿಗೆ ಐದು ವರ್ಷಗಳಿಗೆ ಕಡಿಮೆ ಇಲ್ಲದಂತಹ ಕಠಿಣ ಶಿಕ್ಷೆ ವಿಧಿಸಲು ಮಸೂದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.
ದ್ವೇಷ ಭಾಷಣ ನಿಷೇಧ
- ರಾಜ್ಯದಲ್ಲಿ ದ್ವೇಷ ಭಾಷಣ ಹಾಗೂ ದ್ವೇಷಾಪರಾಧಗಳನ್ನು ತಡೆಯಲು ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆ -2025’ ಅನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ರೂಪಿಸಿತ್ತು. ಎರಡೂ ಸದನಗಳಲ್ಲಿ ಅಂಗೀಕಾರವಾಗಿತ್ತು. ಅಂಕಿತಕ್ಕಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು.
- ಆದರೆ, ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್ ನೀಡಿದ್ದ ಕೆಲವು ತೀರ್ಪುಗಳನ್ನು ಉಲ್ಲೇಖಿಸಿ ಮತ್ತು ಸಾಂವಿಧಾನಿಕವಾಗಿ ಸಂರಕ್ಷಿತವಾದ ಪ್ರಜಾಪ್ರಭುತ್ವದ ಮೇಲೆ ತೀವು ನಕಾರಾತ್ಮಕ ಪರಿಣಾಮ ಉಂಟುಮಾಡುವ ಸಾಧ್ಯತೆಯ ಆತಂಕ ವ್ಯಕ್ತಪಡಿಸಿ ಈ ಮಸೂದೆಯನ್ನು ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು.
- ‘ದ್ವೇಷ ಅಪರಾಧಗಳನ್ನು ಸಹಿಸುವುದಿಲ್ಲ’ ಎಂದು 2018ರ ಜುಲೈ 17ರಂದು ಹಾಗೂ ಕೋಮು ದ್ವೇಷ ಹರಡುವ ಅಥವಾ ದ್ವೇಷ ಭಾಷಣದಲ್ಲಿ ತೊಡಗಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ’ ಎಂದು 2025ರ ಮೇ 5ರಂದು ಸುಪ್ರೀಂ ಕೋರ್ಟ್ ಪ್ರತ್ಯೇಕ ತೀರ್ಪುಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿತ್ತು ಈ ತೀರ್ಪುಗಳನ್ನು ಪರಿಗಣಿಸಿ ಮಸೂದೆಯನ್ನು ರೂಪಿಸಲಾಗಿದೆ. ಹೀಗಾಗಿ, ಅಂಕಿತ ಹಾಕುವಂತೆ ರಾಷ್ಟ್ರಪತಿಗೆ ಮನವಿ ಮಾಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯ ಹೇಳಿದೆ.
- ಈ ಮಸೂದೆಯನ್ನು ಬಿಜೆಪಿ ನಾಯಕರು, ಆರ್‌ಎಸ್ಎಸ್. ಹಿಂದುತ್ವವಾದಿ ಸಂಘಟನೆಗಳ ಮುಖಂಡರು ತೀವ್ರವಾಗಿ ಖಂಡಿಸಿದ್ದರು. ವಿರೋಧದ ನಡುವೆಯೂ ಎರಡೂ ಸದನಗಳಲ್ಲಿ ಮಸೂದೆ ಅಂಗೀಕಾರವಾಗುವಂತೆ ಸರ್ಕಾರ ನೋಡಿಕೊಂಡಿತ್ತು.
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ: ‘ಜೈಲುಗಳಲ್ಲಿ ದಟ್ಟಣೆ: ಮಾಹಿತಿ ಸಲ್ಲಿಸಲು ಸೂಚನೆ
ಸಂದರ್ಭ: ಕಾರಾಗೃಹ ಗಳಲ್ಲಿನ ದಟ್ಟಣೆ ನಿವಾರಣೆಗೆ ತೆಗೆದುಕೊಂಡಿರುವ ಕ್ರಮಗಳು ಹಾಗೂ ಪ್ರತಿಯೊಂದು ಕಾರಾಗೃಹದಲ್ಲಿನ ಅನುಮೋದಿತ ಸಾಮರ್ಥ್ಯಕ್ಕೆ ಸಂಬಂಧಿಸಿದ ಪರಿಷ್ಕೃತ ವಿವರಗಳನ್ನು ಸಲ್ಲಿಸುವಂತೆ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಜತೆಗೆ ವರದಿ ಸಲ್ಲಿಕೆಗೆ ಮೇ18ರ ವರೆಗೆ ಗಡುವು ನೀಡಿದೆ.
- ಕಾರಾಗೃಹಗಳಲ್ಲಿನ ಅಮಾನವೀಯ ಸ್ಥಿತಿಗತಿಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣವನ್ನು ಸುಪ್ರೀಂ ಕೋರ್ಟ್ ದಾಖಲಿಸಿಕೊಂಡಿದ್ದು, ನ್ಯಾಯಮೂರ್ತಿ ವಿಕ್ರಮ್ ನಾಥ್ ಹಾಗೂ ನ್ಯಾಯಮೂರ್ತಿ ಸಂದೀಪ್ ಮೆಹ್ರಾ ಅವರಿದ್ದ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿದೆ.
- ಕಾರಾಗೃಹ ಸ್ಥಿತಿಗತಿ ಕುರಿತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸಲ್ಲಿಸಿರುವ ಅಂಕಿ-ಅಂಶದ ವರದಿಗಳು 2023ಕ್ಕೆ ಸಂಬಂಧಿಸಿದ್ದು ಎಂದು ಅಮಿಕಸ್ ಕ್ಯೂರಿ ಆಗಿರುವ ಹಿರಿಯ ವಕೀಲ ಗೌರವ್ ಅಗರ್ವಾಲ್ ಅವರು ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ.
- ಹೀಗಾಗಿ, 2026ರ ಮಾರ್ಚ್1ರವರೆಗಿನ ದಾಖಲಾತಿಗೆ ಅನುಗುಣವಾಗಿ ವಿವರಗಳನ್ನು ಸಲ್ಲಿಸಲು ನ್ಯಾಯಪೀಠ ನಿರ್ದೇಶಿಸಿದೆ ಜತೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಒಟ್ಟು ಮಹಿಳಾ ಕಾರಾಗೃಹಗಳ ಸಂಖ್ಯೆ ಎಷ್ಟು? ಅಲ್ಲಿ ಏನೆಲ್ಲಾ ಸೌಲಭ್ಯಗಳಿದೆ ? ಮಹಿಳಾ ಕೈದಿಗಳ ಜತೆಗಿರುವ ಮಕ್ಕಳ ವಿದ್ಯಾಭ್ಯಾಸ ಹಾಗೂ ಕಲ್ಯಾಣಕ್ಕೆ ಸಂಬಂಧಿಸಿದಂತೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ವಿವರಗಳನ್ನು ಸಲ್ಲಿಸುವಂತೆಯೂ ಪೀಠ ಸೂಚಿಸಿದೆ.
ಪತ್ರಿಕೆ-IV: ಸಾಮಾನ್ಯ ಅಧ್ಯಯನ-3
ಪತ್ರಿಕೆ-V: ಸಾಮಾನ್ಯ ಅಧ್ಯಯನ-4
Sources: Prajavani