ಭಾರತೀಯ ರಾಜಕೀಯ: ಮರ್ಯಾದೆಗೇಡು ಹತ್ಯೆಗೆ ಜೈಲು
ಸಂದರ್ಭ: ಜಾತಿಮೀರಿಪ್ರೀತಿಸುವವರು,ಮದುವೆಯಾದವರನ್ನು’ಮರ್ಯಾದೆ’ಯಹೆಸರಿನಲ್ಲಿಹಲ್ಲೆಮಾಡುವ, ಹತ್ಯೆಗೈಯುವಇಲ್ಲವೆಅವರಿಗೆಬಹಿಷ್ಕಾರಹಾಕುವವರನ್ನುಹೆಡೆಮುರಿಕಟ್ಟಲುಮುಂದಾಗಬೇಕೆಂಬಜನಾಗ್ರಹಕ್ಕೆಸ್ಪಂದಿಸಿರುವಸರ್ಕಾರ, ಇದಕ್ಕಾಗಿಮಸೂದೆಯೊಂದನ್ನುಸಿದ್ಧಪಡಿಸಿದೆ.

- ಇಂತಹ ಕೃತ್ಯ ಎಸಗುವವರಿಗೆ ಜೀವಾವಧಿ ಜೈಲು ವಾಸ ಹಾಗೂ ₹5 ಲಕ್ಷದವರೆಗೆ ದಂಡ ವಿಧಿಸಲು ಮಸೂದೆ ಅವಕಾಶ ಕಲ್ಪಿಸಿದೆ.
- ತಾಲ್ಲೂಕಿನ ಇನಾಂ ಇತ್ತೀಚೆಗೆ ಹುಬ್ಬಳ್ಳಿ ವೀರಾಪುರ ಗ್ರಾಮದಲ್ಲಿ ಮರ್ಯಾದೆಗೇಡು ಹತ್ಯೆ ನಡೆದಿತ್ತು. ಆ ಬೆನ್ನಲ್ಲೆ, ‘ಇಂತಹ ಮೃಗೀಯ, ಅಮಾನವೀಯ ಮತ್ತು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಗಳನ್ನು ತಡೆಯಲು ಪ್ರತ್ಯೇಕ ಕಾಯ್ದೆ ಜಾರಿಗೆ ತರಬೇಕು’ ಎಂಬ ಅಗ್ರಹ ಹೆಚ್ಚಿತ್ತು.
- ಈ ಅಶಯ ಸಾಕಾರಗೊಳಿಸಲು ಕಾರ್ಯೋನ್ಮುಖ ವಾಗಿರುವ ಸರ್ಕಾರ, ‘ಕರ್ನಾಟಕ ಮದುವೆ ಮತ್ತು ಸಂಗಾತಿ ಆಯ್ಕೆಯ ಸ್ವಾತಂತ್ರ್ಯ, ಗೌರವ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ತಡೆಗಟ್ಟುವಿಕೆ ಮತ್ತು ನಿಷೇಧ ಮಸೂದೆ-2026’ರ ಕರಡು ರೂಪಿಸಿದೆ. ಕಾನೂನು ಮತ್ತು ಸಂಸದೀಯ ಇಲಾಖೆ ಇದನ್ನು ಸಿದ್ಧಪಡಿಸಿದೆ.
- ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅಪರಾಧ ತಡೆಗೆ ಕಾನೂನು ಅವಶ್ಯ. ಮದುವೆ ಮತ್ತು ಸಂಬಂಧಗಳಲ್ಲಿ ವೈಯಕ್ತಿಕ ಆಯ್ಕೆಯ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವ ಯಾವುದೇ ನಡವಳಿಕೆಯನ್ನು ತಡೆಯಲು, ಶಿಕ್ಷಿಸಲು, ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಉದ್ದೇಶವನ್ನು ಮಸೂದೆ ಹೊಂದಿದೆ.
- ವೈಯಕ್ತಿಕ ಜೀವನದ ವಿಷಯದಲ್ಲಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಗಾತಿ ಆಯ್ಕೆ ಮತ್ತು ಸಂಬಂಧದ ಹಕ್ಕುಗಳೂ ಸೇರಿವೆ. ತಮ್ಮ ಕುಟುಂಬದ ಸದಸ್ಯರು ಸೇರಿದಂತೆ ಯಾರಿಂದಲೂ ಅಡೆತಡೆ ಇಲ್ಲದೆ, ತಮ್ಮ ಆಯ್ಕೆಯಂತೆ ಮದುವೆಯಾಗುವ ಹಕ್ಕು ವಯಸ್ಕರಿಗೆ ಇದೆ.
- ಮದುವೆ ಅಥವಾ ಸಂಬಂಧವು ಜಾತಿ, ಬುಡಕಟ್ಟು, ಸಮುದಾಯ. ಧರ್ಮ, ಸಂಪ್ರದಾಯಕ್ಕೆ ಅಗೌರವ ತಂದಿದೆ ಅಥವಾ ಕುಟುಂಬದ ಇಚ್ಛೆಗೆ ವಿರುದ್ಧವಾಗಿದೆ ಎಂಬ ಕಾರಣಕ್ಕೆ ವಿರೋಧಿಸುವುದು ಕಾನೂನುಬಾಹಿರ ಹಾಗೂ ಅಪರಾಧ ಎನಿಸಲಿದೆ. ಈ ರೀತಿಯ ವಿರೋಧ ವ್ಯಕ್ತವಾಗುವ ಆತಂಕ ಇರುವವರು ನ್ಯಾಯಾಲಯದ ಮೂಲಕ ಪೊಲೀಸರ ರಕ್ಷಣೆ ಪಡೆಯಬಹುದು. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಪೊಲೀಸರ ಜವಾಬ್ದಾರಿ, ಆದೇಶ, ಉಲ್ಲಂಘಿಸಿದರೆ ಎರಡು ವರ್ಷಗಳವರೆಗೆ ಜೈಲು ಅಥವಾ ₹1 ಲಕ್ಷದವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು. ಮಹಿಳೆಯರಿಗೆ ಜೈಲು ಶಿಕ್ಷೆ ಇರುವುದಿಲ್ಲ. ಇಂತಹ ಕೃತ್ಯದ ಪುರಾವೆ ನಾಶ, ಕೃತ್ಯಕ್ಕೆ ಪ್ರೇರೇಪಿಸುವುದು, ಸಂಚು ರೂಪಿಸುವುದು ಅಥವಾ ಆತ್ಮಹತ್ಯೆಗೆ ಪ್ರೋತ್ಸಾಹಿಸುವುದೂ ಅಪರಾಧ. ಇಂತಹ ಅಪರಾಧಗಳಲ್ಲಿ ಸಂಜ್ಞೆಯ, ಜಾಮೀನುರಹಿತ ಮತ್ತು ರಾಜೀ ಸಂಧಾನಕ್ಕೆ ಅವಕಾಶ ಇರುವುದಿಲ್ಲ.
- ಬಾಧಿತ ದಂಪತಿ ರಕ್ಷಣೆ ಕೋರಿ ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಪೊಲೀಸರಿಗೆ ದೂರು ನೀಡಬಹುದು.
- ದಂಪತಿಗೆ ಸುರಕ್ಷಿತ ಸ್ಥಳದಲ್ಲಿ ಮನೆ, ನಗದು ಅಥವಾ ವಸ್ತುವಿನ ರೂಪದಲ್ಲಿ ಪರಿಹಾರ ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯ ದೂರಿನ ಮೇಲೆ 60 ದಿನಗಳ ಒಳಗೆ ತನಿಖೆ ನಡೆಸಿ ವಿಶೇಷ ನ್ಯಾಯಾಲಯದಲ್ಲಿ ಆರೋ ಸಲ್ಲಿಸಬೇಕು. ಆರೋಪಪಟ್ಟಿ
- ಜಿಲ್ಲಾಧಿಕಾರಿ ಅಥವಾ ಎಸ್‌ಪಿಗಳು ದೂರನ್ನು ಸೂಕ್ಷ್ಮವಾಗಿ ನಿರ್ವಹಿಸ ಬೇಕು. ಮದುವೆಯನ್ನು ಶಾಸ್ಕೋ-ಕ್ತವಾಗಿ ನಡೆಸಲು ಮತ್ತು ಅವರು ಬಯಸಿದರೆ ಪೊಲೀಸ್ ರಕ್ಷಣೆಯಲ್ಲಿ ನೋಂದಾಯಿಸಲು ನೆರವು ನೀಡ ಬಹುದು. ಮದುವೆಯ ನಂತರ ದಂಪತಿ ಬಯಸಿದರೆ, ನೆಪ ಮಾತ್ರದ ಶುಲ್ಕ ಪಾವತಿಸಿ ಒಂದು ತಿಂಗಳ ಅವಧಿಗೆ ವಸತಿ ಒದಗಿಸಬಹುದು. ನಂತರ ತಿಂಗಳ ಆಧಾರದಲ್ಲಿ ವಿಸ್ತರಿಸಬಹುದು.
- ಮೇಲ್ವಿಚಾರಣೆಗೆ ಸಮಿತಿ: ಇಂತಹ ಅಪರಾಧಗಳನ್ನು ತಡೆಗಟ್ಟಲು ಪ್ರತಿ ಜಿಲ್ಲೆಯಲ್ಲಿ ವಿಶೇಷ ಕೋಶವನ್ನು ಸರ್ಕಾರ ರಚಿಸಬೇಕು. ಈ ಕೋಶಗಳು ದೂರು ಸ್ವೀಕರಿಸಲು, ಸಹಾಯ ಮತ್ತು ರಕ್ಷಣೆ ನೀಡಲು 24 ಗಂಟೆಗಳ ಸಹಾಯವಾಣಿ ಸ್ಥಾಪಿಸಬೇಕು.
- ಕಾಯ್ದೆಯ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಮೇಲ್ವಿಚಾರಣಾ ಸಮಿತಿ ರಚಿಸಬೇಕು. ಈ ಸಮಿತಿಯು ಶಾಸಕರು, ಎಸ್‌ಪಿ, ಮೂವರು ಗ್ರೂಪ್ ‘ಎ’ ಅಧಿಕಾರಿಗಳು ಮತ್ತು ಸರ್ಕಾರೇತರ ಸಂಸ್ಥೆಗಳ ಮೂವರು ಸದಸ್ಯರನ್ನು ಒಳಗೊಂಡಿರುತ್ತದೆ. ಸಮಿತಿಯು ಕನಿಷ್ಠ * 3 ತಿಂಗಳಿಗೊಮ್ಮೆ ಸಭೆ ಸೇರಬೇಕು.
- ಪ್ರಕರಣಗಳ ವಿಚಾರಣೆಗೆ ವಿಶೇಷ ತ್ವರಿತ ಗತಿ ನ್ಯಾಯಾಲಯವನ್ನು ರಚಿಸಬಹುದು ಎಂದೂಮಸೂದೆ ಹೇಳಿದೆ.
