ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.
“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ಪೂರ್ವಭಾವಿ ಪರೀಕ್ಷೆ
ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
ವಿಶ್ವ ವುಶು ಚಾಂಪಿಯನ್ಷಿಪ್: ಭಾರತಕ್ಕೆ 2 ಕಂಚು
ಸಂದರ್ಭ: ಭಾರತದ ಗೌತಮ್ ಮಂಕಾಸ್ ಹಾಗೂ ಅನು ಅವರು ಇಲ್ಲಿ ನಡೆಯುತ್ತಿರುವ 10ನೇ ವಿಶ್ವ ವುಶು ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಭಾನುವಾರ ಕಂಚಿನ ಪದಕ ಗೆದ್ದುಕೊಂಡರು. ಉಪೇಂದ್ರೋ ಚೌಗಮ್, ಪಮಾ ಹೀಬಾ ಸಿಂಗ್, ಯುವರಾಜ್ ಹಾಗೂ ವಿಕ್ಟರ್ ಅವರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದರು.
- ಗೌತಮ್ ಅವರು ಬಾಲಕರ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಪರಾಭವಗೊಂಡರು. ಅನು ಅವರು ನಾಲ್ಕರ ಘಟದಲ್ಲಿ ಚೀನಾದ ಝಾಂಗ್ ಲಿನಿಂಗ್ ವಿರುದ್ಧ ಸೋತರು.
- ಉಪೇಂದ್ರೋ ಅವರು ಸೆಮಿಫೈನಲ್ ಪಂದ್ಯದಲ್ಲಿ ಈಜಿಪ್ಟ್ನ ಅಹ್ಮದ್ ಮೊಹಮ್ಮದ್ ಅವರನ್ನು ಸೋಲಿಸಿದರು. ಪಮಾ ಅವರು ಸೆನೆಗಲ್‌ನ ಅಲಿಮೂ ಸಿ ಅವರನ್ನು ಮಣಿಸಿ, ಫೈನಲ್ ಪ್ರವೇಶಿಸಿದರು. ಯುವರಾಜ್ ಹಾಗೂ ವಿಕ್ಟರ್ ಅವರು ಸೆಮಿಫೈನಲ್ ಪಂದ್ಯಗಳಲ್ಲಿ ಕ್ರಮವಾಗಿ ಫಿಲಿಪ್ಪಿನ್ಸ್‌ನ ಷಿವೀಲ್ ಬಂಟಾಲಿ ಮತ್ತು ಈಜಿಪ್ಟ್ನ ಸಯೀದ್ ಕರೀಂ ಮೊಹಮ್ಮದ್ ವಿರುದ್ಧ ಗೆಲುವು ಸಾಧಿಸಿದರು.
ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
ಕಾಂಗ್ರೆಸ್ ಪಕ್ಷವು ಒಟ್ಟು ಐದು ಗ್ಯಾರಂಟಿಗಳನ್ನು ಅಸ್ಸಾಂ ಜನತೆಗೆ ನೀಡಿದೆ
ಅಸ್ಸಾಂ ವಿಧಾನಸಭೆ ಚುನಾವಣೆ 2026ರ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ಸಾಂನ ನೌಬೋಯಿಚಾದಲ್ಲಿ ಸಾರ್ವಜನಿಕ ರಾಲಿಯನ್ನುದ್ದೇಶಿಸಿ ಮಾತನಾಡುತ್ತಾ **’ಐದು ಗ್ಯಾರಂಟಿ’**ಗಳನ್ನು ಘೋಷಿಸಿದ್ದಾರೆ. ಕರ್ನಾಟಕ ಮತ್ತು ತೆಲಂಗಾಣದ ಮಾದರಿಯಲ್ಲೇ ಈ ಯೋಜನೆಗಳನ್ನು ರೂಪಿಸಲಾಗಿದೆ.

ಅಸ್ಸಾಂ ಜನತೆಗೆ ನೀಡಲಾದ ಆ ಐದು ಮುಖ್ಯ ಗ್ಯಾರಂಟಿಗಳು ಇಲ್ಲಿವೆ:
- ಮಹಿಳಾ ಸಬಲೀಕರಣ (ಮಹಿಳೆಯರಿಗೆ ಆರ್ಥಿಕ ನೆರವು)
ಪ್ರತಿಯೊಬ್ಬ ಮಹಿಳೆಗೆ ಯಾವುದೇ ಷರತ್ತುಗಳಿಲ್ಲದೆ ಮಾಸಿಕ ನಗದು ವರ್ಗಾವಣೆ.
ಇದರೊಂದಿಗೆ, ಮಹಿಳಾ ಉದ್ಯಮಿಗಳಿಗೆ ತಮ್ಮ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ವಿಸ್ತರಿಸಲು ₹50,000 ಧನಸಹಾಯ. - ಆರೋಗ್ಯ ರಕ್ಷಣೆ (ಕ್ಯಾಶ್‌ಲೆಸ್ ವಿಮೆ)
ಪ್ರತಿ ಕುಟುಂಬಕ್ಕೆ ₹25 ಲಕ್ಷ ವರೆಗಿನ ನಗದು ರಹಿತ (Cashless) ಆರೋಗ್ಯ ವಿಮಾ ಸೌಲಭ್ಯ. ಈ ಯೋಜನೆಯನ್ನು ಈಗಾಗಲೇ ರಾಜಸ್ಥಾನ ಮತ್ತು ಕರ್ನಾಟಕದಂತಹ ರಾಜ್ಯಗಳಲ್ಲಿ ಜಾರಿಗೆ ತಂದಿರುವ ಮಾದರಿಯಲ್ಲೇ ರೂಪಿಸಲಾಗಿದೆ. - ಭೂಮಿ ಹಕ್ಕು (ಶಾಶ್ವತ ಪಟ್ಟಾ)
ಅಸ್ಸಾಂನ ಸುಮಾರು 10 ಲಕ್ಷ ಮೂಲ ನಿವಾಸಿಗಳಿಗೆ (Indigenous people) ವಾರ್ಷಿಕ ಪಟ್ಟಾಗಳ ಬದಲಿಗೆ ಶಾಶ್ವತ ಭೂಮಿ ಪಟ್ಟಾ (Land Rights) ನೀಡುವ ಭರವಸೆ. - ಹಿರಿಯ ನಾಗರಿಕರ ಗೌರವ (ಪಿಂಚಣಿ)
ರಾಜ್ಯದ ಎಲ್ಲಾ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ₹1,250 ಮಾಸಿಕ ಪಿಂಚಣಿ ನೀಡುವ ಯೋಜನೆ. - ಸಾಂಸ್ಕೃತಿಕ ನ್ಯಾಯ (ಜುಬಿನ್ ಗಾರ್ಗ್ ಪ್ರಕರಣ)
ಅಸ್ಸಾಂನ ಜನಪ್ರಿಯ ಗಾಯಕ ದಿವಂಗತ ಜುಬಿನ್ ಗಾರ್ಗ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸುವ ಭರವಸೆ.
ಮುಖ್ಯ ಪರೀಕ್ಷೆ
ಪತ್ರಿಕೆ-I: ಪ್ರಬಂಧಗಳು
ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ
ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ
ಪತ್ರಿಕೆ-II: ಸಾಮಾನ್ಯ ಅಧ್ಯಯನ-1
ಪತ್ರಿಕೆ-III: ಸಾಮಾನ್ಯ ಅಧ್ಯಯನ-2
ಪತ್ರಿಕೆ-IV: ಸಾಮಾನ್ಯ ಅಧ್ಯಯನ-3
3 ವರ್ಷದ ಹಿಂದೆ ಬಿಎಂಟಿಸಿ ಬಸ್ಗಳಲ್ಲಿ ಮಿಥೆನಾಲ್ ಮಿಶ್ರಿತ ಇಂಧನ ಪ್ರಯೋಗ
ಸಂದರ್ಭ: ಪ್ರಯೋಗಕ್ಕೆ ಸೀಮಿತವಾದ ಮಿಥೆನಾಲ್: ಡೀಸೆಲ್ ಮೇಲಿನ ಅವಲಂಬನೆ ಕಡಿಮೆ ಮಾಡಲು, ವಾಯುಮಾಲಿನ್ಯ ತಡೆಯಲು ಮಿಥೆನಾಲ್ ಮಿಶ್ರಿತ ಇಂಧನ ಪ್ರಯೋಗವನ್ನು ಮೂರು ವರ್ಷಗಳ ಹಿಂದೆ ಬಿಎಂಟಿಸಿ ಬಸ್ಗಳಲ್ಲಿ ನಡೆಸಲಾಗಿತ್ತು ಇದು ಪ್ರಯೋಗಕ್ಕೆ ಸೀಮಿತಗೊಂಡಿದ್ದು, ಬಿಎಂಟಿಸಿಯ ಯಾವುದೇ ಬಸ್ಗಳಲ್ಲಿ ಇದುವರೆಗೆ ಅಳವಡಿಕೆಯಾಗಿಲ್ಲ.
- ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಸೂಚನೆಯಂತೆ 2016ರಲ್ಲಿ ನೀತಿ ಆಯೋಗವು ಮಿಥೆನಾಲ್ ಮಿಶ್ರಿತ ಇಂಧನ ಪ್ರಯೋಗ ಆರಂಭಿಸಿತ್ತು ಸತತ 7 ವರ್ಷ ವಿವಿಧ ವಾಹನಗಳಲ್ಲಿ ಪ್ರಯೋಗ ನಡೆಸಿತ್ತು ಸಕಾರಾತ್ಮಕ ಫಲಿತಾಂಶ ಬಂದ ಬಳಿಕ ಸಾರಿಗೆ ವಾಹನಗಳಲ್ಲಿ ಈ ಪ್ರಯೋಗ ನಡೆಸಲು ನಿರ್ಧರಿಸಿತ್ತು. 2023ರ ಮಾರ್ಚ್‌ನಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ಬಿಎಂಟಿಸಿಯ 20 ಬಸ್‌ಗಳಲ್ಲಿ ಪ್ರಯೋಗ ಆರಂಭಿಸಿತ್ತು ನಾಲ್ಕು ತಿಂಗಳು ಈ ಬಸ್‌ಗಳು ಮಿಥೆನಾಲ್ ಮಿಶ್ರಿತ ಇಂಧನದಲ್ಲಿ ಸಂಚರಿಸಿದ್ದವು.
- ‘ಅಶೋಕ ಲೈಲ್ಯಾಂಡ್ ಕಂಪನಿಯು ತಯಾರಿಸಿದ ಬಸ್‌ಗಳನ್ನು ಪ್ರಯೋಗಕ್ಕೆ ಬಳಸಲಾಗಿತ್ತು. 3.2 ಲಕ್ಷ ಕಿ.ಮೀ. ಓಡಾಟ ನಡೆಸಿದ ಬಳಿಕ ಎರಡು ಬಸ್‌ಗಳ ಎಂಜಿನ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು ಪ್ರಯೋಗಾಲಯದ ವರದಿ, ಸಂಚಾರದ ಸಮಯದ ಸ್ಥಿತಿಗತಿ ಎಲ್ಲ ಸೇರಿಸಿ ಸಾರಿಗೆ ಸಚಿವಾಲಯಕ್ಕೆ ವರದಿ ನೀಡಲಾಗಿದೆ’ ಎಂದು ಮಿಥನಾಲ್ ಕೋರ್ ಕಮಿಟಿ ಸದಸ್ಯ.
- ‘ಮಿಥೆನಾಲ್ ಮಿಶ್ರಿತ ಇಂಧನ ಪ್ರಯೋಗದ ಸಂದರ್ಭದಲ್ಲಿ ಪ್ರತಿ ಕಿಲೋಮೀಟರ್ಗೆಗೆ ಸುಮಾರು 10 ಉಳಿತಾಯವಾಗಿದೆ. ಡೀಸೆಲ್ ಎಂಜಿನ್ ವಾಹನಗಳನ್ನೇ ಇದಕ್ಕೆ ಬಳಸಲಾಗಿತ್ತು ಸಣ್ಣ ಅವಧಿಯ ಪ್ರಯೋಗದ ಸಮಯದಲ್ಲಿ ದೊಡ್ಡ ಮಟ್ಟದ ಸಮಸ್ಯೆ ಕಾಣಿಸಿಕೊಂಡಿಲ್ಲ, ದೀರ್ಘ ಕಾಲ ಬಳಸಿದಾಗ ಪರಿಣಾಮ ಹೇಗಿರುತ್ತದೆ ಎಂಬುದು ಗೊತ್ತಾಗಿಲ್ಲ ಡೀಸೆಲ್ ಎಂಜಿನ್ ವಾಹನದಲ್ಲಿ ಮಿಥೆನಾಲ್ ಮಿಶ್ರಿತ ಡೀಸೆಲ್ ಬಳಸಿದಾಗ ಎಂಜಿನ್ ತುಕ್ಕು ಹಿಡಿಯುವ ಸಾಧ್ಯತೆ ಇರುತ್ತದೆ. ಇಂಧನದಲ್ಲಿ ಉಳಿತಾಯ ಆಗಿದ್ದಕ್ಕಿಂತ ಹೆಚ್ಚು ಎಂಜಿನ್‌ಗೆ ವೆಚ್ಚವಾದರೆ ಕಷ್ಟ’ ಎಂದು ಬಿಎಂಟಿಸಿ ಎಂಜಿನಿಯರ್ ಒಬ್ಬರು ತಿಳಿಸಿದ್ದಾರೆ.
- ‘ಯುದ್ಧದ ಕರಿನೆರಳು ಪೆಟ್ರೋಲ್ ಡೀಸೆಲ್ ಮೇಲೂ ಬೀಳುತ್ತಿರುವುದರಿಂದ ಮಿಥನಾಲ್ ಬಳಕೆ ಮಾಡಿದ್ದರೆ ಡೀಸೆಲ್ ಮೇಲಿನ ಅವಲಂಬನೆ ಕಡಿಮೆ ಮಾಡಬಹುದಿತ್ತು ಮಿಥನಾಲ್ ಬೆಲೆ ₹25ರಿಂದ ₹27 ಇರುವುದರಿಂದ ವೆಚ್ಚ ಕಡಿಮೆಯಾಗುತ್ತಿತ್ತು ಎಂದು ಚಾಲಕರೊಬ್ಬರು ತಿಳಿಸಿದರು.
ಪ್ರಯೋಗವೇನು?
- ಈ 15ರಷ್ಟು ಮಿಥನಾಲ್ ಶೇ 12ರಷ್ಟು ಕಪ್ಪರ್ಸ್, ಶೇ 2ರಷ್ಟು ಸಿಟೇನ್ ಇಂಪವರ್ ಹಾಗೂ ಶೇ 71 ಭಾಗ ಡೀಸೆಲ್ ಮಿಶ್ರಣ ಮಾಡಿ ಬಳಸಲಾಗುತ್ತದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಿಥೆನಾಲ್ ಮಿಶ್ರಣ ಮಾಡಿ ಇಂಧನ ಒದಗಿಸಿತ್ತು 80 ಸಾವಿರ ಲೀಟರ್ ಮಿಥನಾಲ್ ಮಿಶ್ರಣ ಇಂಧನ ಬಳಕೆ ಮಾಡಲಾಗಿತ್ತು.
ಪತ್ರಿಕೆ-V: ಸಾಮಾನ್ಯ ಅಧ್ಯಯನ-4